ಕೂಡಿಗೆ, ಫೆ. ೨೮: ಕೂಡಿಗೆಯ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ೩೦ ದಿನಗಳ ಕಾಲ ನಡೆದ ಲಘು ವಾಹನ ತರಬೇತಿಯ ಕಾರ್ಯಕ್ರಮದ ಸಮಾರೋಪ ಸಮಾರಂಭವು ಯೂನಿಯನ್ ಗ್ರಾಮೀಣ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಭಂವರ್ಸಿAಗ್ ಮೀನಾ ಭಾಗವಹಿಸಿ ತರಬೇತಿ ಪಡೆದ ೩೨ ಶಿಬಿರಾರ್ಥಿ ಗಳಿಗೆ, ಪ್ರಮಾಣ ಪತ್ರವನ್ನು ವಿತರಿಸಿ ದರು,
ಹಿಂದಿನ ತರಬೇತಿಯ ೩೩ ಶಿಬಿರಾರ್ಥಿಗಳಿಗೆ ಚಾಲನಾ ಪರವಾನಗಿ (ಐiಛಿeಟಿse) ವಿತರಿಸಿ ದರು. ಹಾಗೂ ಇದೀಗ ೩೧ ಶಿಬಿರಾರ್ಥಿಗಳ ತರಬೇತಿ ನಡೆಯು ತ್ತಿದ್ದು, ಶಿಬಿರಾರ್ಥಿಗಳ ಕುರಿತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಾತನಾಡಿ ಹಿಂದೆ ಪುರುಷ ಪ್ರಧಾನ ಸಮಾಜವಿತ್ತು. ಈಗ ಎನ್.ಆರ್. ಎಲ್.ಎಂ ಸಂಜಿವಿನಿ ಯೋಜನೆ ಬಂದ ನಂತರ ಮಹಿಳೆಯರನ್ನು ಅವರ ಹೆಸರಿನಿಂದ ಗುರುತಿಸು ವಂತಾಗಿದೆ ಮಹಿಳೆಯರು ಈಗ ಎಲ್ಲಾ ರಂಗಗಳಲ್ಲೂ ಮುಂದೆ ಬಂದಿದ್ದು, ಚಾಲನ ಪರವಾನಗಿ (ಐiಛಿeಟಿse) ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಹಾಗೂ ಗ್ರಾಮೀಣ ಮಟ್ಟದ ನಿರುದ್ಯೋಗಿ ಮಹಿಳೆಯರಿಗೆ ಎನ್.ಆರ್.ಎಲ್.ಎಂ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದಿಂದ ಅವಕಾಶ ಕಲ್ಪಿಸಿದ್ದು ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹಾರೈಸಿದರು. ನಂತರ ತಾವೇ ಸ್ವತಃ ಘನ ತ್ಯಾಜ್ಯ ವಿಲೇವಾರಿ ವಾಹನವನ್ನು ಚಾಲನೆ ಮಾಡುವ ಮೂಲಕ ಶಿಬಿರಾರ್ಥಿಗಳಿಗೆ ಉತ್ತೇಜನ ನೀಡಿ ದರು. ಕಾರ್ಯಕ್ರಮದಲ್ಲಿ ಎನ್.ಆರ್. ಎಲ್.ಎಂ ಸಂಜೀವಿನಿ ಯೋಜನೆಯ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾದ, ಪಿ. ಕುಮಾರ, ಜಿಲ್ಲಾ ವ್ಯವಸ್ಥಾಪಕ ಜಗನ್ನಾಥ್, ಯುವ ವೃತ್ತಿಪರರ ಅರ್ಜುನ್, ವಾಹನ ಚಾಲನ ತರಬೇತುದಾರರಾದ ಜಮುನಾ ಹಾಗೂ ಯೂನಿಯನ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಸಿಬ್ಬಂದಿ ವರ್ಗದವರಾದ ಎಂ. ಎಂ. ಸಲಾವುದ್ದೀನ್ ಮತ್ತು ಹರೀಶ್ ಹಾಜರಿದ್ದರು.