ಮಡಿಕೇರಿ, ಫೆ.೨೮: ತಾಲೂಕಿನ ಭಾಗಮಂಡಲ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ರೂಢಿ ಸಂಪ್ರದಾಯದAತೆ ತಾ.೧ ರಂದು (ಇಂದು) ಮಹಾಶಿವರಾತ್ರಿ ಪೂಜಾ ಕಾರ್ಯಕ್ರಮ ನಡೆಯಲಿದೆ.

ಬೆಳಗ್ಗೆ ೭ ಗಂಟೆಗೆ ಶತರುದ್ರಾಭಿಷೇಕ, ೮ ಗಂಟೆಗೆ ರುದ್ರಹೋಮ, ಮಧ್ಯಾಹ್ನ ೧೨ ಗಂಟೆಗೆ ರುದ್ರಹೋಮದ ಪೂರ್ಣಾಹುತಿ, ಮಧ್ಯಾಹ್ನ ೧೨.೩೦ ಗಂಟೆಗೆ ಮಹಾಮಂಗಳಾರತಿ, ದೇವರ ಉತ್ಸವ ಬಲಿ ಮತ್ತು ಪ್ರಸಾದ ವಿತರಣೆ, ಸಂಜೆ ೫.೩೦ ಗಂಟೆಗೆ ತ್ರಾಯಂಬಕ ಸೇವೆ, ೬ ಗಂಟೆಗೆ ದೀಪಾರಾಧನೆ, ೬.೩೦ ಗಂಟೆಗೆ ಏಕದಶ ರುದ್ರಾಭಿಷೇಕ, ರಾತ್ರಿ ೮ ಗಂಟೆಗೆ ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ, ೧೦ ಗಂಟೆಗೆ ತ್ರಿವೇಣಿ ಸಂಗಮದಲ್ಲಿ ಕಟ್ಟೆ ಪೂಜೆ ಮತ್ತು ೧೧ ಗಂಟೆಗೆ ಯಕ್ಷಗಾನ ಬಯಲಾಟ ನಡೆಯಲಿದೆ.

ಈ ಕಾರ್ಯಕ್ರಮಗಳಲ್ಲಿ ಸಾರ್ವಜನಿಕ ಭಕ್ತಾಧಿಗಳು ಪಾಲ್ಗೊಂಡು, ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹಾಗೂ ಭಕ್ತಾದಿಗಳು ಸ್ವ ಇಚ್ಛೆಯಿಂದ ದೇವಾಲಯದ ವತಿಯಿಂದ ನಡೆಯಲಿರುವ ಕಾರ್ಯಕ್ರಮಗಳ ಪ್ರಾಯೋಜಕತ್ವವನ್ನು ಪಡೆಯಲು ಇಚ್ಛಿಸಿದಲ್ಲಿ, ತಗಲುವ ವೆಚ್ಚವನ್ನು ತಾವೇ ಭರಿಸಲು ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಹೆಸರು ನೋಂದಾಯಿಸಲು ಹೆಚ್ಚಿನ ಮಾಹಿತಿಗೆ ೯೯೭೨೯೭೩೭೭೦ ನ್ನು ಸಂಪರ್ಕಿಸಬಹುದು ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ಮತ್ತು ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ.ಕೃಷ್ಣಪ್ಪ ತಿಳಿಸಿದ್ದಾರೆ.