ಕೂಡಿಗೆ, ಫೆ. ೨೮: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ಕ್ಷೇತ್ರದ ಆವರಣದಲ್ಲಿ ಇಂದು (ಮಾರ್ಚ್೧ ರಂದು) ಶಿವರಾತ್ರಿಯ ಪ್ರಯುಕ್ತ ಕಾರ್ಯಕ್ರಮ ನಡೆಯಲಿದೆ. ದೇವಾಲಯದಲ್ಲಿ ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ರುದ್ರಹೋಮ, ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ದೇವಾಲಯದ ಆವರಣದಲ್ಲಿ ನಡೆಯಲಿವೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಟಿ ಎಂ ಚಾಮಿ ತಿಳಿಸಿದ್ದಾರೆ. ಸಂಜೆ ೪ ಗಂಟೆಗೆ ಶ್ರೀ ಉಮಾಮಹೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತ ವಾದ ಭವ್ಯ ಮಂಟಪದಲ್ಲಿ ಕುಳ್ಳಿರಿಸಿ ವಾದ್ಯ ಗೋಷ್ಠಿಯೊಂದಿಗೆ ಕ್ಷೇತ್ರದ ಪ್ರದಕ್ಷಿಣೆ, ನಂತರ ಹುದುಗೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಸ್ವಸ್ಥಳಕ್ಕೆ ಬರುವ ಕಾರ್ಯಕ್ರಮ ನಡೆಯದೆ ಎಂದು ಅವರು ತಿಳಿಸಿದ್ದಾರೆ.