ಶಾಸಕ ಅಪ್ಪಚ್ಚು ರಂಜನ್
ಕುಶಾಲನಗರ, ಫೆ. ೨೮: ಕುಶಾಲನಗರದ ಕಾವೇರಿ ಬಡಾವಣೆ ಯಲ್ಲಿನ ಅಪೂರ್ಣಗೊಂಡ ಕಲಾ ಭವನ ಕಟ್ಟಡ ಕಾಮಗಾರಿ ಪೂರ್ಣ ಗೊಳಿಸಿ ಸಾರ್ವಜನಿಕ ಉದ್ದೇಶಕ್ಕೆ ಬಿಟ್ಟುಕೊಡುವ ಸಂಬAಧ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಸಾಲಿನ ಪದಾಧಿಕಾರಿಗಳ ನಿಯೋಗದಿಂದ ನೀಡಿದ ಕಲಾಭವನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಬೇಕಾದ ಅನುದಾನವನ್ನು ಸರ್ಕಾರ ದಿಂದ ಬಿಡುಗಡೆಗೊಳಿಸಿ ಸಾಹಿತ್ಯಿಕ ಚಟುವಟಿಕೆಗಳಿಗೆ ಬಹುಬೇಗನೆ ಕಟ್ಟಡ ವನ್ನು ದೊರಕಿಸಿಕೊಡಬೇಕೆಂಬ ಮನವಿಗೆ ಓಗೊಟ್ಟು ಮಾತನಾಡಿದ ಶಾಸಕ ರಂಜನ್, ತಾಲೂಕು ಸೇರಿ ದಂತೆ ಜಿಲ್ಲೆಯಾದ್ಯಂತ ಸಾಹಿತ್ಯಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ, ಯುವಕರಲ್ಲಿ ಹಾಗೂ ಶಾಲಾ ವಿದ್ಯಾರ್ಥಿಗಳಲ್ಲಿ ಕನ್ನಡ ನಾಡು-ನುಡಿ, ಕಲೆ, ಆಚಾರ-ವಿಚಾರಗಳು ಹಾಗೂ ನಾಡಿನ ಸಂಸ್ಕೃತಿಗಳನ್ನು ಪರಿಚಯಿಸುವಂತಾಗಬೇಕು. ಒಟ್ಟಾರೆ ಸಾಹಿತ್ಯ ಪರಿಷತ್ತಿನ ಆಶಯಕ್ಕೆ ಒತ್ತಾಸೆಯಾಗಿ ನಾವುಗಳು ನಿಮ್ಮೊಡನೆ ಇರುತ್ತೇವೆ ಎಂದು ಶಾಸಕ ರಂಜನ್ ತಿಳಿಸಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ಮೂರ್ತಿ ಅವರಿಗೆ ಕನ್ನಡದ ಶಲ್ಯ ಧರಿಸುವ ಮೂಲಕ ಅಭಿನಂದಿಸಿ ದರು. ಈ ಸಂದರ್ಭ ಕೋಶಾಧಿಕಾರಿ ಕೆ.ವಿ. ಉಮೇಶ್, ಗೌರವ ಕಾರ್ಯದರ್ಶಿ ಎಸ್. ನಾಗರಾಜು, ವಿದೂಷಿ ಬಿ.ಕೆ. ಮಂಜುಭಾರ್ಗವಿ, ಕಾರ್ಯಕಾರಿ ಮಂಡಳಿ ನಿರ್ದೇಶಕ ರಾದ ಕೆ.ಕೆ. ಹೇಮಂತಕುಮಾರ್, ಟಿ.ವಿ. ಶೈಲಾ, ಕಸಾಪ ಜಿಲ್ಲಾ ಸಮಿತಿ ನಿರ್ದೇಶಕ ಟಿ.ಜಿ. ಪ್ರೇಮಕುಮಾರ್, ಯತೀಶ್ ಇದ್ದರು.