ಮಡಿಕೇರಿ, ಫೆ. ೨೮: ಒಲಂಪಿಯನ್, ಪದ್ಮಶ್ರೀ ಪುರಸ್ಕೃತ ಎಂ.ಪಿ. ಗಣೇಶ್ ಅವರನ್ನು ರಾಜ್ಯ ಹಾಕಿ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ತಾ. ೨೭ ರಂದು ಬೆಂಗಳೂರಿನ ಹಾಕಿ ಕ್ಲಬ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗಷ್ಟೆ ಕೇಂದ್ರದಿAದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಕಾರಣ ಗಣೇಶ್ ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಗಣೇಶ್ ಅವರ ಪತ್ನಿ ಪ್ರೇಮಾ ಅವರನ್ನು ಕೂಡ ಗೌರವಿಸಲಾಯಿತು.