ವೀರಾಜಪೇಟೆ, ಫೆ. ೨೮: ಕಾಫಿ ಮೂಟೆಗಳನ್ನು ಹೊತ್ತು ನಗರಕ್ಕೆ ಆಗಮಿಸುತ್ತಿದ್ದ ಗೂಡ್ಸ್ ತ್ರಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಆಸ್ಪತ್ರೆಗೆ ದಾಖಲಾದ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ಮಲಬಾರ್ ರಸ್ತೆ ಸುಣ್ಣದಬೀದಿ ನಿವಾಸಿ ಮೊಹಮ್ಮದ್ ತಾಹೀರ್ (೩೧) ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿ.
ಮೈತಾಡಿ ಗ್ರಾಮದ ಕಾಫಿ ಬೆಳೆಗಾರ ಬಲ್ಲಚಂಡ ಹರಿ ಎಂಬುವರ ಮನೆಯಿಂದ ಕಾಫಿ ಚೀಲಗಳನ್ನು ತುಂಬಿಕೊAಡು ಬಜಾಜ್ ಆಪೇ ಗೂಡ್ಸ್ ವಾಹನ (ಕೆಎ ೩೨ ಡಿ ೨೭೦೦)ರಲ್ಲಿ ಆಗಮಿಸುತಿದ್ದ ವೇಳೆ ಮೂರ್ನಾಡು ರಸ್ತೆ ಮಠದ ಗದ್ದೆಯ ತಿರುವಿನಲ್ಲಿ ಎದುರಿನಿಂದ ಆಗಮಿಸುತಿದ್ದ ಮಾರುತಿ ಸುಜುಕಿ ಕಾರಿಗೆ (ಕೆಎ ೪೭ ಎಂ ೪೪೬೦) ಅಪ್ಪಳಿಸಿದೆ. ಪರಿಣಾಮ ಗೂಡ್ಸ್ ವಾಹನವು ಜಖಂಗೊAಡಿದ್ದು, ಚಾಲಕ ಮೊಹಮ್ಮದ್ ತಾಹೀರ್‌ಗೆ ಗಾಯಗ ಳಾಗಿವೆ. ವಾಹನದಲ್ಲಿ ಪ್ರಯಾಣಿಸುತಿದ್ದ ಬಲ್ಲಚಂಡ ಹರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಮಾರುತಿ ಅಲ್ಟೋ ಕಾರು (ಕೆಎ ೩೦ ಎಂಕೆ ೩೮೬೨) ವಾಹನವೂ ಜಖಂಗೊAಡಿದೆ. ಗಾಯಾಳುಗಳನ್ನು ಸ್ಥಳೀಯರು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮೊಹಮ್ಮದ್ ತಾಹೀರ್ ಅವರು ನೀಡಿದ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
-ಕೆ.ಕೆ.ಎಸ್.