ಮಡಿಕೇರಿ, ಫೆ. ೨೭: ಕೊಡಗಿನಲ್ಲಿ ೩೧೮ ಸಹಕಾರಿ ಸಂಘಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತ್ತಿವೆ. ಜಿಲ್ಲೆಯಲ್ಲಿ ಎರಡು ಸಂಘಗಳ ಕಾರ್ಯ ಸ್ಥಗಿತಗೊಂಡಿದ್ದು ಸದ್ಯದಲ್ಲಿಯೇ ಮುಚ್ಚಲ್ಪಡಲಿವೆ. ಬಸವನಹಳ್ಳಿಯ ಲ್ಯಾಂಪ್ ಸಂಘದಲ್ಲಿ ವಸೂಲಾತಿಗೆ ಕ್ರಮ ಕೈಗೊಳ್ಳಲಾಗಿದ್ದು, ವೀರಾಜಪೇಟೆಯ ಮುಸ್ಲಿಂ ಸಂಘದಲ್ಲಿ ಮರು ಲೆಕ್ಕ ಪರಿಶೋಧನೆಗೆ ಆದೇಶಿಸಲಾಗಿದೆ.ಈ ಕುರಿತಾಗಿ “ಶಕ್ತಿ” ಮಾಹಿತಿ ಬಯಸಿದಾಗ ಜಿಲ್ಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ಕೆ.ಬಿ. ಸಲೀಂ ವಿವರವಿತ್ತರು.ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಗಮನಿಸಿದಾಗ ಸಹಕಾರ ಸಂಘಗಳು ಸದಸ್ಯರ ಹಿತದೃಷ್ಟಿಯಿಂದ ಸಮರ್ಪ ಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಹಕಾರಿ ಸಂಘಗಳ ಕಾಯ್ದೆಯನ್ವಯ ನೋಂದಾವಣೆಗೊAಡ ೩೧೮ ವಿವಿಧ ರೀತಿಯ ಸಹಕಾರ ಸಂಘಗಳೂ ಇದುವರೆಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ೨ ಸಹಕಾರ ಸಂಘಗಳನ್ನು ಮುಚ್ಚುವತ್ತ ತೀರ್ಮಾನಿ ಸಲಾಗಿದೆ. ಲೆಕ್ಕ ಪರಿಶೋಧನೆಯಿಲ್ಲದೆ, ವಾರ್ಷಿಕ ಮಹಾಸಭೆಗಳನ್ನು ನಡೆಸದೆ, ಸದಸ್ಯರ ಹಿತಚಿಂತನೆ ಮರೆತು ನಿಷ್ಕಿçಯವಾಗಿದ್ದ ಈ ಸಂಘಗಳನ್ನು ಮುಂದಿನ ಏಪ್ರಿಲ್ನಲ್ಲಿ ಮುಚ್ಚಲಾಗು ತ್ತದೆ. ಆದರೆ ಈ ಸಂಘಗಳಲ್ಲಿ ಸದಸ್ಯರಿಗೆ ನೀಡುವಂತಹ ಆರ್ಥಿಕ ಋಣ ಬಾಧ್ಯತೆಗಳೇನೂ ಇಲ್ಲದಿರು ವದರಿಂದ ಸಮಸ್ಯೆ ಉದ್ಭವಿಸದು ಎಂದು ಸಲೀಂ ತಿಳಿಸಿದರು.೨೨ ಸಹಕಾರ ಸಂಘಗಳು ದಿವಾಳಿಯತ್ತ ಸಾಗಿದ್ದು ಇವುಗಳನ್ನು ಮುಚ್ಚುವ ಮುನ್ನ ಲಿಕ್ವಿಡೇಟರ್ಗಳನ್ನು ನೇಮಿಸಿ ಪರಿಶೀಲಿಸಲಾಗುತ್ತ್ತಿದೆ. ಮೇಲ್ನೋಟಕ್ಕೆ ಸದಸ್ಯರುಗಳ ಠೇವಣಾತಿ ಮರು ಪಾವತಿಯಂತಹ ವ್ಯವಹಾರಗಳು ಬಾಕಿಯಿರುವದು ಕಂಡು ಬಾರದಿದ್ದರೂ ಈ ದಿಸೆÀಯಲ್ಲ್ಲಿಯೂ ಲಿಕ್ವಿಡೇಟರ್ಗಳು ಕೂಲಂಕಷವಾಗಿ ತಪಾಸಣೆ ಮಾಡಲಿದ್ದಾರೆ.
ಈ ಸಹಕಾರ ಸಂಘÀಗಳ ಪೈಕಿ ಈಗಲೂ ಯಾರಾದರೂ ಸದಸ್ಯರು ಈ ಸಂಘವನ್ನು ಉಳಿಸಬೇಕು ಎಂದು ಮುಂದೆ ಬಂದರೆ ಅದಕ್ಕೆ ಮರು ಅವಕಾಶ ನೀಡಲಾಗುತ್ತದೆ ಎಂದು ಉಪನಿಬಂಧಕರು ಮಾಹಿತಿಯಿತ್ತರು.
ಲ್ಯಾಂಪ್ ಸೊಸೈಟಿ: ವಸೂಲಾತಿಗೆ ಕ್ರಮ
ಬಸವನಹಳ್ಳಿಯ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘ (ಲ್ಯಾಂಪ್ ಸೊಸೈಟಿ)ಪ್ರಸಕ್ತ ಆಡಳಿತ ಮಂಡಳಿ ಅಧಿಕಾರಾವಧಿಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಹಿಂದಿನ ಅಧ್ಯಕ್ಷ ಎಸ್ ಎನ್ ರಾಜಾರಾವ್ ಅವರ ಆಡÀಳಿತಾವಧಿ ಸುಮಾರು ರೂ. ೨೨ ಲಕ್ಷದಷ್ಟು ಹಣ ದುರುಪಯೋಗ ವಾಗಿದೆ. ಈ ಹಣವನ್ನು ಪಾವತಿಸು ವದಾಗಿ ಅವರು ಒಪ್ಪಿದ್ದರೂ ಪಾವತಿಸ ಲಿಲ್ಲ. ೨೯ ಸಿ ಅನ್ವಯ ತನಿಖೆ ಮಾಡು ವದರೊಂದಿಗೆ
(ಮೊದಲ ಪುಟದಿಂದ) ಎಬಿಜೆ ಅಂದರೆ “ಅಟೇಚ್ಮೆಂಟ್ ಬಿಫೋರ್ ಜಡ್ಜ್ ಮೆಂಟ್” ಕಾನೂನಿನ ಅವಕಾಶದಡಿ ಅವರಿಗೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ದುರುಪಯೋಗದ ಹಣವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಲೀಂ ವಿವರಿಸಿದರು.
ಮುಸ್ಲಿಂ ಸಂಘÀ ಪುನರ್ಜೀವ
ಈ ನಡುವೆ ವೀರಾಜಪೇಟೆಯ ಮುಸ್ಲಿಂ ಸಹಕಾರ ಸಂಘÀದಲ್ಲಿ ಕಳೆದ ೧೦ ವರ್ಷಗಳಿಂದಲೂ ಲೆಕ್ಕ ಪರಿಶೋಧನಾ ವರದಿಗಳನ್ನು ಸಮರ್ಪಕವಾಗಿ ಮಾಡುತ್ತಿಲ.್ಲ ಸಂಘವು ನಷ್ಟದಲ್ಲಿದ್ದರೂ ಮೇಲ್ನೋಟಕ್ಕೆ ಲಾಭದಲ್ಲಿದೆ ಎಂದು ತೋರಿಸುತ್ತ ಬೂದಿ ಮುಚಿದ್ಚ ಕೆಂಡದAತೆ ವ್ಯವಹಾರ ಮಾಡಲಾಗಿದೆ. ಅನೇಕ ಸದಸ್ಯರುಗಳು ಈ ಕುರಿತಾಗಿ ಪತ್ರ್ರಿಕೆಯಲ್ಲಿ ಆಗಿಂದಾಗೆ ಅಸಮಾಧಾನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾವು ಇರಿಸಿದ ಠೇವಣಿ ಬಗ್ಗೆಯೂ ಆತಂಕಗೊAಡಿದ್ದಾರೆ. ಇದೀಗ ನಾಲ್ಕೆöÊದು ವರ್ಷಗಳ ಮರು ಲೆಕ್ಕ ಪರಶೋಧನೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಯಾವ್ಯಾವ ವರ್ಷ ಅವ್ಯವÀಹಾರವಾಗಿದೆಯೇ ಎಂದು ಪರಿಶೀಲಿಸಲಾಗುತ್ತದೆ. ಇದೀಗ ಸದ್ಯದಲ್ಲಿಯೇ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಅವರು ಸಮರ್ಪಕವಾಗಿ ಪ್ರಯತ್ನಿಸಿದರೆ ನಿಧಾನವಾಗಿಯಾದರೂ ಸಂಘÀವನ್ನು ಪುನರುತ್ಥಾನಗೊಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಫಿ ಸಹಕಾರ ಸಂಘ
ಸಲೀA ಅವರು ಕೊಡಗು ಜಿಲ್ಲ್ಲಾ ಕಾಫಿ ಸಹಕಾರ ಸಂಘದ ಹಂಗಾಮಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಘÀದ ಹಿಂದಿನ ನಷ್ಟದ ಕುರಿತು ಪ್ರಶ್ನಿಸಿದಾಗ ಹಳೆಯ ನಷ್ಟದ ನಡುವೆ ಕಳೆದ ಎರಡು ಮೂರು ವರ್ಷಗಳಿಂದ ಸಂಘವು ಲಾಭದ ಹಾದಿಯಲ್ಲಿದೆ. ಅಲ್ಲದೆ, ಹೆಬ್ಬಾಲೆ ಮತ್ತು ಹುಣಸೂರಿನ ಪೆಟ್ರೋಲ್ ಬಂಕ್ಗಳನ್ನು ನವೀಕರಣಗೊಳಿಸಿದುದು ಲಾಭ ತಂದು ಕೊಡುತ್ತಿದೆ ಎಂದರು.
ಡಿ.ಸಿ.ಸಿ.ಬ್ಯಾAಕ್
ಕೊಡಗಿಗೆ ಸಹಕಾರ ಸಂಘಗಳ ಆಡಳಿತಕ್ಕೆ ಹೊರಗಿನಿಂದ ಅಧಿಕಾರಿಗಳೇ ಬರುತ್ತಿಲ್ಲ. ಇದರಿಂದಾಗಿ ಸಲೀಂ ಅವರು ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ನ ಸಿಇಓ ಆಗಿಯೂ ಹೆಚ್ಚಿನ ಹೊಣೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಲೀಂ ಪ್ರಕಾರ ಡಿ.ಸಿ.ಸಿ, ಬ್ಯಾಂಕ್ ಜಿಲ್ಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ಸಿಬ್ಬಂದಿ ಕೊರತೆ
ಜಿಲ್ಲೆಯ ಸಹಕಾರೀ ವಲಯದಲ್ಲಿ ಕೆಲವೊಂದು ಅಗತ್ಯ ತನಿಖೆ ನಡೆಸÀಬೇಕಾದರೆ, ಕ್ರಮ ಕೈಗೊಳ್ಳಬೇಕಾದರೆ ಕಚೇರಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕಾದರೆ ಸಿಬ್ಬಂದಿ ಕೊರತೆ ಬಹಳಷ್ಟÄ ತೊಡಕುಂಟಾಗಿದೆ. ಸಹಕಾರೀ ಉಪ ನಿಬಂಧಕರ ಕಚೇರಿಯಲ್ಲಿ ಸದ್ಯಕ್ಕೆ ೪೨ ಸಿಬ್ಬ್ಬಂದಿ ಪೈಕಿ ೧೨ ಮಂದಿ ಮಾತ್ರ ಇದ್ದು ಸಿಬ್ಬಂದಿ ಕೊರತೆ ತುಂಬಿದರೆ ಸಕಾಲಿಕವಾಗಿ, ಸಮರ್ಪಕವಾಗಿ ಕಾರ್ಯ ನಿರ್ವಹಿಸುವÀ ಮೂಲಕ ಸಹಕಾರೀ ವಲಯವನ್ನು ಇನ್ನೂ ಸುಭದ್ರಗೊಳಿಸಬಹುದಾಗಿದೆ.