ಹಾರಂಗಿ : ಹಾರಂಗಿಯ ಆರೋಗ್ಯ ಕೇಂದ್ರದಲ್ಲಿ ಪೋಲಿಯೋ ನಿರೋಧಕ ಲಸಿಕೆ ಅಭಿಯಾನ ನಡೆಯಿತು. ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್ ಅವರು ಮಕ್ಕಳಿಗೆ ಪೋಲಿಯೋ ನಿರೋಧಕ ಹನಿಗಳನ್ನು ನೀಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಪೋಲಿಯೋ ಅನೇಕ ಜೀವಗಳಿಗೆ ಸವಾಲಾಗಿದೆ. ಆದರೆ ವಿಶ್ವ ಪೋಲಿಯೋ ದಿನದಂದು, ಅದನ್ನು ನಮ್ಮ ಜೀವನದಿಂದ ದೂರವಿಡುವ ಭರವಸೆ ನೀಡೋಣ ಎಂದು ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ಮಣಿ, ವೈದ್ಯರಾದ ಅಭಿಷೇಕ್, ಆಶಾ ಕಾರ್ಯಕರ್ತರಾದ ಸುಲೇಖಾ, ನಾಗರತ್ನ ಮತ್ತು ಅಂಗನವಾಡಿ ಕಾರ್ಯಕರ್ತರಾದ ಜ್ಯೋತಿ, ಶೋಭಾ ಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿ ಆರೋಗ್ಯ ಸ್ವಾಮಿ ಮತ್ತು ಸಾರ್ವಜನಿಕರು ಹಾಜರಿದ್ದರು.ಎಡಪಾಲ: ಇಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಮ್ಮದ್ ರವರು ಮಗುವಿಗೆ ಲಸಿಕೆ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಆರೋಗ್ಯ ಸಹಾಯಕಿ ಕನಕಾವತಿ, ಆಶಾಕಾರ್ಯಕರ್ತೆ ಗಂಗಮ್ಮ, ಅಭಿದಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ಚೆಯ್ಯಂಡಾಣೆ : ಇಲ್ಲಿನ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾ. ಪಂ. ಉಪಾಧ್ಯಕ್ಷೆ ಮಂಜುಳಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ ಆಶಾ, ಮಂಜುಳಾ, ಭವಾನಿ ಆಶಾ ಕಾರ್ಯಕರ್ತೆ ರಾಜೇಶ್ವರಿ ಅಂಗನವಾಡಿ ಕಾರ್ಯಕರ್ತೆ ಗೌರಮ್ಮ, ತಾರ ಇದ್ದರು. ಸೋಮವಾರಪೇಟೆ: ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ "ಪಲ್ಸ್ ಪೋಲಿಯೋ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ಡಾ. ಕಿರಣ್ಕುಮಾರ್, ರೋಟರಿ ಅಧ್ಯಕ್ಷÀ ಎಂ.ಎA.ಪ್ರಕಾಶ್ಕುಮಾರ್, ಕಾರ್ಯದರ್ಶಿ ಡಿ.ಪಿ.ಧರ್ಮಪ್ಪ, ಮಾಜಿ ಉಪ ರಾಜ್ಯಪಾಲ ಪಿ.ಕೆ.ರವಿ, ಮಾಜಿ ಅಧ್ಯಕ್ಷರಾದ ಎಚ್.ಸಿ.ನಾಗೇಶ್, ಡಾ.ರಾಕೇಶ್ ಪಟೇಲ್, ಸ್ಕೌಟ್ ಮತ್ತು ಗೈಡ್ಸ್ ಅಧಿಕಾರಿ ಚಂದ್ರಕಲಾ, ಸಾರ್ವಜನಿಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ರೋಟರಿ ಅಧ್ಯಕ್ಷರ ಉದ್ಘಾಟನೆಯೊಂದಿಗೆ ಮಕ್ಕಳಿಗೆ ಲಸಿಕೆಯನ್ನು ಹಾಕಲಾಯಿತು.
ಪಾಲಿಬೆಟ್ಟ : ಪಲ್ಸ್ ಪೋಲಿಯೋ ಅಭಿಯಾನ ಪ್ರಯುಕ್ತ ಪಾಲಿಬೆಟ್ಟ ಆಸ್ಪತ್ರೆಯಲ್ಲಿ ಜಿ.ಪಂ. ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|| ರೋಹಿತ್, ಡಾ|| ಜಗದೀಶ್ ಶಿವಪ್ಪಗೋಟಿಯಲ್, ದಾದಿಯರು ಆಶಾಕಾರ್ಯಕರ್ತರು ಇದ್ದರು.ಚೆನ್ನಯ್ಯನಕೋಟೆ : ಇಲ್ಲಿನ ಗ್ರಾ.ಪಂ. ಸದಸ್ಯೆ ಜಾನಕಿ ಅವರು ರಾಷ್ಟಿçÃಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿದರು.
ಡಾ. ಶಿವಪ್ಪಗೋಟಿಯಾಳ, ಗ್ರಾಪಂ ಸದಸ್ಯೆ ರತ್ನ, ಮಾಜಿ ಲಯನ್ ಕ್ಲಬ್ ಅಧ್ಯಕ್ಷ ಗಣಪತಿ, ಸಮಾಜ ಸೇವಕ ಮನು. ಪಿಎಚ್ಸಿಒಎಸ್ ಪ್ರಮೀಳಾ, ಸ್ಟಾಫ್ ನರ್ಸ್ ವಿದ್ಯಾ, ಸಿಎಚ್ಒ ಅನುಷಾ, ಲ್ಯಾಬ್ಟೆಕ್ನಿಷಿಯನ್ ಅಶ್ವತಿ, ಆಶಾಸ್ ಇಂದಿರಾ, ಲಲಿತಾ, ಮಂಜುಳಾ ಅಂಗನವಾಡಿ ಶಿಕ್ಷಕಿಯರಾದ ಮುತ್ತಗಿರ, ಮಕ್ಕಳೊಂದಿಗೆ ಪಾಲಕರು ಹಾಜರಿದ್ದರು.