ಕೂಡಿಗೆ, ಫೆ.೨೮: ರಾಜ್ಯದಲ್ಲಿ ಪ್ರಥಮವಾಗಿ ಪ್ರಾರಂಭಗೊAಡ ಕೂಡಿಗೆಯ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ದಿಢೀರ್ ಆಗಿ ಭೇಟಿ ನೀಡಿ ಶಾಲೆ, ಕ್ರೀಡಾಂಗಣ, ಬಾಲಕಿಯರ ಮತ್ತು ಬಾಲಕರ ವಸತಿ ನಿಲಯ ಮತ್ತು ತರಗತಿಯ ಕೊಠಡಿಗಳು ಸೇರಿದಂತೆ ಹಾಕಿ ಮೈದಾನ ಮತ್ತು ಅಥ್ಲೆಟಿಕ್ ಮೈದಾನಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಎಲ್ಲಾ ತರಗತಿಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಕಟ್ಟಡಗಳ ಅವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.

೨೫ ವರ್ಷಗಳಿಂದಲೂ ಸುಣ್ಣ ಬಣ್ಣ ಕಾಣದ ವಸತಿ ಗೃಹಗಳನ್ನು ನೋಡಿದ ಶಾಸಕ ಅಪ್ಪಚ್ಚು ರಂಜನ್; ಶಾಲೆಯ ಅಧಿಕಾರಿ ವರ್ಗದವರು ಏನು ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ವಸತಿ ಗೃಹಗಳ ವೀಕ್ಷಣೆ ಮಾಡಿ ಅಲ್ಲಿನ ಗೋಡೆಗಳ ದುರಸ್ತಿಗೆ ತುರ್ತಾಗಿ ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಾಗಿ ಶಾಲೆ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು. ಶಾಲೆಗೆ ಆಗಬೇಕಾಗಿರುವ ಎಲ್ಲಾ ವ್ಯವಸ್ಥೆಗಳ ಬಗ್ಗೆ ಸಮಗ್ರವಾದ ವರದಿಯನ್ನು ನೀಡುವಂತೆ ಮತ್ತು ವ್ಯವಸ್ಥಿತವಾಗಿ ಶಾಲೆಯನ್ನು ನಡೆಸಿಕೊಂಡು ಹೋಗುವಂತೆ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು. ವಿದ್ಯಾರ್ಥಿಗಳಿಂದ ಸಣ್ಣ ದೂರು ಬಂದರೂ ಸಹ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಂತರ ಶಾಸಕರು ಅಡುಗೆ ಕೊಠಡಿಗೆ ತೆರಳಿ ಅಲ್ಲಿನ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿ ಗಳಿಗೆ ದಿನಂಪ್ರತಿ ನೀಡುವ ಆಹಾರದ ವಿವರಗಳನ್ನು ಪಡೆದು ಸಮರ್ಪಕವಾಗಿ ನಿಯಮಾನು ಸಾರವಾಗಿ ಆಹಾರ ನೀಡುವಂತೆ ಸೂಚನೆ ನೀಡಿದರು.

ನೂತನವಾಗಿ ನಿರ್ಮಾಣ ವಾಗಿರುವ ನಾಲ್ಕು ಕೋಟಿ ವೆಚ್ಚದ ಕೃತಕ ಹಾಕಿ ಮೈದಾನ (ಟರ್ಫ್)ಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಮತ್ತು ಮೈದಾನಕ್ಕೆ ಬೇಕಾಗುವ ನೀರಿನ ಸಾಮರ್ಥ್ಯದ ಬಗ್ಗೆ ಮಾಹಿತಿ ಹಾಕಿ ತರಬೇತಿದಾರರಿಂದ ಪಡೆದರು. ಸುಸಜ್ಜಿತವಾದ ಹಾಕಿ ಮೈದಾನದ ಸದುಪಯೋಗ ಪಡಿಸಿಕೊಂಡು ಹಾಕಿ ಪಟುಗಳು ರಾಜ್ಯ ಮತ್ತು ರಾಷ್ಟçದ ಮಟ್ಟದಲ್ಲಿ ತಮ್ಮ ಪ್ರತಿಭೆ ತೋರಿಸಿ ನಂತರ ಅಂತರರಾಷ್ಟಿçÃಯ ಮಟ್ಟದಲ್ಲಿ ಕೊಡಗಿನ ಕೂಡಿಗೆ ಕ್ರೀಡಾ ಶಾಲೆ ತಂಡ ಪ್ರತಿನಿಧಿಸುವಂತೆ ತರಬೇತಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಕ್ರೀಡಾ ತರಬೇತಿದಾರರೂ ಸಹ ವಿದ್ಯಾರ್ಥಿಗಳ ಅಭಿರುಚಿಗೆ ಅನುಗುಣವಾಗಿ ತರಬೇತಿ ನೀಡಬೇಕು ಎಂದು ಸೂಚನೆ ನೀಡಿದರು.

೧೫ ವರ್ಷಗಳ ಹಿಂದೆ ನಿರ್ಮಾಣವಾಗಿರುವ ೪೦೦ ಮೀಟರ್ ಓಟದ ಅಥ್ಲೆಟಿಕ್ ಮೈದಾನದ ವೀಕ್ಷಣೆ ಮಾಡಿ ಮೈದಾನದ ವ್ಯವಸ್ಥೆಯನ್ನು ಸರಿಪಡಿಸಲು ಸಂಬAಧಿಸಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಮಗ್ರವಾದ ಮಾಹಿತಿಯನ್ನು ನೀಡುವಂತೆ ಮತ್ತು ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆಗಳು ಆಗದಂತೆ ಕಾರ್ಯ ನಿರ್ವಹಿಸಬೇಕು ಎಂಬ ಎಚ್ಚರಿಕೆ ನೀಡಿದರು.

ಹಾಕಿ ಮತ್ತು ಅಥ್ಲೆಟಿಕ್ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕ್ರೀಡಾ ಶಾಲೆಯ ಆವರಣದಲ್ಲಿರುವ ವಸತಿ ಗೃಹದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳು ಇದ್ದು, ಅವರುಗಳಿಂದ ಪ್ರತ್ಯೇಕವಾಗಿ ಕ್ರೀಡೆ ಮತ್ತು ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳಿಂದ ಸಮಗ್ರವಾದ ಮಾಹಿತಿಯನ್ನು ಪಡೆದರು.

ಶಾಲೆಯ ವಸತಿ ಗೃಹಗಳ ದುರಸ್ತಿ, ಕೊಠಡಿಗಳ ನಿರ್ಮಾಣ ಸೇರಿದಂತೆ ಆಗಬೇಕಾಗಿರುವ ಕಾಮಗಾರಿಗಳ ಎಲ್ಲಾ ವರದಿಯನ್ನು ಸಮಗ್ರವಾಗಿ ನೀಡುವಂತೆ ಸೂಚನೆ ನೀಡಿದರು.

ನಂತರ ಶಾಸಕ ಅಪ್ಪಚ್ಚು ರಂಜನ್ ಮಾತನಾಡುತ್ತಾ ಸರಕಾರದ ವತಿಯಿಂದ ಆಗಬೇಕಾಗಿರುವ ಎಲ್ಲಾ ಕಾಮಗಾರಿಗಳಿಗೆ ಅನುದಾನ ನೀಡುವ ಭರವಸೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರೊಂದಿಗೆ ಚರ್ಚಿಸಿ ಕೂಡಿಗೆ ಶಾಲೆಯ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವ ಜೊತೆಗೆ ಪದವಿ ಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮುಂದಿನ ಸಾಲಿನಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು. ಸರಕಾರ ಕ್ರೀಡಾ ಇಲಾಖೆಯ ಶಾಲೆಗಳಿಗೆ ನೀಡುತ್ತಿರುವ ಸೌಲಭ್ಯಗಳು ಸದುಪಯೋಗ ಆಗಬೇಕಾಗಿದೆ. ಅದರ ಪ್ರಯೋಜನವನ್ನು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ದೇವಕುಮಾರ್ ಸೇರಿದಂತೆ ಕ್ರೀಡಾ ತರಬೇತಿದಾರರು, ವಸತಿ ನಿಲಯದ ಮೇಲ್ವಿಚಾರಕರು ಸಿಬ್ಬಂದಿ ವರ್ಗದವರು ಹಾಜರಿದ್ದರು.

-ಕೆ.ಕೆ. ನಾಗರಾಜಶೆಟ್ಟಿ.