ಮಡಿಕೇರಿ, ಫೆ. ೨೮: ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟಿçÃಯ ದತ್ತಾಂಶ (ಇ-ಶ್ರಮ್) ಯೋಜನೆಯಡಿ ಭಾರತದಾದ್ಯಂತ ನೆಲೆಸಿರುವ ಅಸಂಘಟಿತ ಕಾರ್ಮಿಕರ ವಿವರವನ್ನು ಕೇಂದ್ರೀಕೃತ ದತ್ತಾಂಶದಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ ಕಳೆದ ಆಗಸ್ಟ್ನಲ್ಲಿ ಸರಕಾರದ ಕಾರ್ಮಿಕ ಇಲಾಖೆಯಿಂದ ಅಸಂಘಟಿತ ಕಾರ್ಮಿಕರ ನೋಂದಣಿ ಪ್ರಾರಂಭವಾಗಿದೆ.

ಕೊಡಗು ಜಿಲ್ಲೆಯಲ್ಲಿ ಈ ತನಕ ೨೩,೫೨೮ ಕಾರ್ಮಿಕರು ಇ-ಶ್ರಮ್ ಯೋಜನೆ ಮೂಲಕ ನೋಂದಣಿ ಮಾಡಿಕೊಂಡಿರುವುದಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ ಅವರು ಮಾಹಿತಿ ನೀಡಿದ್ದಾರೆ.

೧೫೬ ವರ್ಗಗಳು

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೃಷಿ ಕಾರ್ಮಿಕರು, ತೋಟ ಕಾರ್ಮಿಕರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮನೆಗೆಲಸ ಕಾರ್ಮಿಕರು, ಚಾಲಕರು, ಟೈಲರ್‌ಗಳು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಕೇಂದ್ರ ಸರಕಾರ ಗುರುತಿಸಿರುವ ಸುಮಾರು ೧೫೬ ವರ್ಗಗಳ ಕಾರ್ಮಿಕರು ಅಸಂಘಟಿತ ವಲಯಕ್ಕೆ ಒಳಪಡುತ್ತಾರೆ. ಇವರುಗಳಿಗೆ ಸಾಮಾಜಿಕ ಭದ್ರತೆ, ಸಮಸ್ಯೆಗಳ ನಿವಾರಣೆ ಸೇರಿದಂತೆ ಸರಕಾರದ ಇತರ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಅವರುಗಳನ್ನು ಗುರುತಿಸುವ ಸಲುವಾಗಿ ಈ ಯೋಜನೆ ರೂಪಿಸಲಾಯಿತು.

ಪ್ರಯೋಜನಗಳು

ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ದತ್ತಾಂಶವು ಸಹಕಾರಿ ಯಾಗಲಿದ್ದು,

(ಮೊದಲ ಪುಟದಿಂದ) ಅಸಂಘಟಿತ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಲು ಹಾಗೂ ಅದನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸರಕಾರಕ್ಕೆ ಸುಲಭವಾಗಲಿದೆ.

ಒಂದು ವರ್ಷದ ಅವಧಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (Pಒ-Sಃಙ) ಪ್ರಯೋಜನ ಪಡೆಯಬಹುದು - ಈ ಯೋಜನೆಯ ಮೂಲಕ ಅಪಘಾತದಿಂದ ಮರಣ ಹೊಂದಿದಲ್ಲಿ ಕುಟುಂಬದವರಿಗೆ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ ಫಲಾನುಭವಿಗಳಿಗೆ ರೂ.೨ ಲಕ್ಷ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ರೂ.೧ ಲಕ್ಷ ಪರಿಹಾರ ನೀಡಲಾಗುತ್ತದೆ. ರಾಷ್ಟಿçÃಯ ವಿಪತ್ತು ಸಂದರ್ಭಗಳಲ್ಲಿ ಅರ್ಹ ಕಾರ್ಮಿಕರಿಗೆ ನೆರವು ನೀಡಲೂ ದತ್ತಾಂಶ ಸಹಾಯವಾಗಲಿದೆ.

ಉಚಿತ ನೋಂದಣಿ

ಕೇAದ್ರ ಸರಕಾರದ ಅಧಿಕೃತ ‘ಇ-ಶ್ರಮ್ ಪೋರ್ಟಲ್’ (ತಿತಿತಿ.eshಡಿಚಿm.gov.iಟಿ) ಮೂಲಕ ಕಾರ್ಮಿಕರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇಲ್ಲದಿದ್ದಲ್ಲಿ ಸಮೀಪದ ಸಾಮಾನ್ಯ ಸೇವಾ ಕೇಂದ್ರ (ಅSಅ) ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಸಿಕೊಳ್ಳಬಹುದು. ಯಶಸ್ವಿ ನೋಂದಣಿ ಬಳಿಕ (Uಂಓ) ಗುರುತಿನ ಚೀಟಿಯನ್ನು ಪಡೆಯಬಹುದು. ಈ ಗುರುತಿನ ಚೀಟಿ ದೇಶದಾದ್ಯಂತ ಜೀವಿತಾವಧಿಯವರೆಗೆ ಮಾನ್ಯತೆ ಪಡೆದಿರುತ್ತದೆ. ನೋಂದಣಿ ಸಂದರ್ಭ ಸರಕಾರ ಗುರುತಿಸಿರುವ ೧೫೬ ವರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ತಾವು ಕಾರ್ಯನಿರ್ವಹಿಸುತ್ತಿರುವ ವರ್ಗ ಇಲ್ಲದಿದ್ದಲ್ಲಿ ‘ಇತರೆ’ ಎಂದು ನಮೂದಿಸಬಹುದಾಗಿದೆ.

ಅರ್ಹತೆಗಳು

ನೋಂದಣಿ ಮಾಡಿಸಿಕೊಳ್ಳುವವರು, ೧೬ ರಿಂದ ೫೯ ವಯೋಮಾನದವ ರಾಗಿರಬೇಕು, ಆದಾಯ ತೆರಿಗೆ ಪಾವತಿದಾರರಾಗಿರಬಾರದು, ಭವಿಷ್ಯ ನಿಧಿ ಹಾಗೂ ಇ.ಎಸ್.ಐ ಫಲಾನುಭವಿಗಳಾಗಿರಬಾರದು, ಆಧಾರ್ ಕಾರ್ಡ್ ಹೊಂದಿರಬೇಕು, ಆಧಾರ್ ಸಂಖ್ಯೆಗೆ ಜೋಡಣೆಯಾಗಿರುವ ಮೊಬೈಲ್ ಫೋನ್ ಸಂಖ್ಯೆ ನೀಡಬೇಕು ಹಾಗೂ ಬ್ಯಾಂಕ್ ಖಾತೆಯ ವಿವರ ನೀಡಬೇಕು.