ಸೋಮವಾರಪೇಟೆ, ಫೆ. ೨೬: ಸಮೀಪದ ಬಜೆಗುಂಡಿ ಗ್ರಾಮದ ಶ್ರೀ ಶನೇಶ್ವರ ದೇವಾಲಯದ ನೂತನ ರಾಜಗೋಪುರ ಉದ್ಘಾಟನೆ, ಕುಂಭಾಬಿಷೇಕ ಮತ್ತು ೪೩ನೇ ವರ್ಷದ ಮಹಾಶಿವರಾತ್ರಿ ಉತ್ಸವ ತಾ. ೨೮ ಮತ್ತು ಮಾ.೧ ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಜೆ.ಸಿ. ರಾಜಶೇಖರ್ ತಿಳಿಸಿದ್ದಾರೆ. ತಾ. ೨೮ರ ಬೆಳಿಗ್ಗೆ ೯ಗಂಟೆಗೆ ದೇವಾಲಯದಲ್ಲಿ ಗಣಪತಿ ಹೋಮ, ಕಳಶ ಪೂಜೆ, ಕಳಶ ಮೆರವಣಿಗೆ, ಮಧ್ಯಾಹ್ನ ೧೨.೩೦ಕ್ಕೆ ಕಳಶ ಸ್ಥಾಪನೆ ಮತ್ತು ಸಂಜೆ ೪ಕ್ಕೆ ಆದಿವಾಸ ಹೋಮ ನಡೆಯಲಿದೆ. ಮಾ.೧ ರಂದು ಬೆಳಿಗ್ಗೆ ೭-೩೦ಕ್ಕೆ ಕಳಶಾಭಿಷೇಕ, ೯ಕ್ಕೆ ಜೀವಕಾಳ ಹೋಮ ಮತ್ತು ನವಗ್ರಹ ಪೂಜೆ ನಡೆಯಲಿದೆ. ಸಂಜೆ ೬ಕ್ಕೆ ಸಹಸ್ರನಾಮ ಪೂಜೆ, ೮ಕ್ಕೆ ಅನ್ನದಾನ, ೧೧ಕ್ಕೆ ಕಳಸ ತರುವುದು ಮತ್ತು ಬೆಳಿಗ್ಗೆ ೪.೩೦ ರಿಂದ ಕೊಂಡಹಾಯುವ ಕಾರ್ಯಕ್ರಮ ನಡೆಯಲಿದೆ.