ಮಡಿಕೇರಿ, ಫೆ. ೨೬: ನೆಹರು ಯುವ ಕೇಂದ್ರ. ಯುವಜನ ವ್ಯವಹಾರ ಕ್ರೀಡಾ ಸಚಿವಾಲಯ ಕೊಡಗು, ಜಿಲ್ಲಾ ಯುವ ಒಕ್ಕೂಟ ಮಡಿಕೇರಿ ಇವರ ವತಿಯಿಂದ ನಡೆದ ರಾಷ್ಟಿçÃಯ ಯುವಜನ ಸಂಸತ್ತು ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯಿಂದ ಅಬ್ದುಲ್ ರಝಕ್ ಹಾಗೂ ಅಮೃತ ಗಿರೀಶ್ ಅವರು ರಾಜ್ಯಮಟ್ಟಕೆ ಆಯ್ಕೆಯಾಗಿದ್ದಾರೆ.

ವರ್ಚುವಲ್ ಭಾಷಣ ಸ್ಪರ್ಧೆಯಲ್ಲಿ ಕೊಡಗು ಜಿಲ್ಲೆಯಿಂದ ಒಟ್ಟು ೯ ಜನ ಯುವ ಜನರು ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ೫ ಜನ ಆಯ್ಕೆಯಾಗಿದ್ದರು. ಇದರಲ್ಲಿ ೨ ಜನ ರಾಜ್ಯಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ರಾಜ್ಯಮಟ್ಟದಲ್ಲಿ ಆಯ್ಕೆಯಾದ ಯುವ ಜನರು ದೆಹಲಿಯ ಸಂಸತ್ತು ಭವನದಲ್ಲಿ ನಡೆಯುವ ರಾಷ್ಟç ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿ ಸಲಿದ್ದಾರೆ. ರಾಷ್ಟçಮಟ್ಟದಲ್ಲಿ ಆಯ್ಕೆಯಾದವರಿಗೆ ಪ್ರಥಮ ಬಹುಮಾನ ೨ಲಕ್ಷ ನಗದು, ದ್ವಿತೀಯ ಬಹುಮಾನ ೧.೫೦ ಲಕ್ಷ ಹಾಗೂ ತೃತೀಯ ಬಹುಮಾನ ೧ ಲಕ್ಷ ಬಹುಮಾನ ನೀಡಲಾಗುವುದು.

ಸ್ಪರ್ಧೆಗೆ ‘ಕೌಶಲ್ಯ ಭಾರತ್’, ‘ಭೇಟಿ ಬಚಾವೋ ಭೇಟಿ ಪಡವೋ’, ‘ಸ್ವಚ್ಛ ಭಾರತ್’, ‘ಸ್ವಸ್ತ ಭಾರತ್’, ‘ಅಖಂಡ ಭಾರತ್’, ‘ಆಯುಷ್ಮಾನ್ ಭಾರತ್’ ಎಂಬ ವಿಷಯಗಳನ್ನು ನೀಡಲಾಗಿತ್ತು.