ನಾಪೋಕ್ಲು, ಫೆ. ೨೬: ಫೆ. ೨೮ ರಂದು ಸಮೀಪದ ಎಮ್ಮೆಮಾಡು ದರ್ಗಾ ಶರೀಫ್ನಲ್ಲಿ ವಾರ್ಷಿಕ ಉರೂಸ್ ನಡೆಯುವ ಕಾರಣ ನಾಪೋಕ್ಲು ಪಟ್ಟಣದ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದೆ. ಇದಕ್ಕಾಗಿ ಪ್ರತೀ ವರ್ಷದಂತೆ ಈ ವರ್ಷವೂ ನಾಪೋಕ್ಲು ಪಟ್ಟಣದ ಮಾರುಕಟ್ಟೆಯಿಂದ ಹಳೇ ತಾಲೂಕು ರಸ್ತೆಯ ಪೆಟ್ರೋಲ್ ಬಂಕ್ವರೆಗೆ ಎರಡು ಕಡೆಗಳಲ್ಲಿಯೂ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು, ವಾಹನ ಚಾಲಕ, ಮಾಲೀಕರು ಸಹಕರಿಸುವಂತೆ ಪೊಲೀಸ್ ಇಲಾಖೆ ಪ್ರಕಟಣೆ ಕೋರಿದೆ.