ಶನಿವಾರಸಂತೆ, ಫೆ. ೨೬: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಜಗೇರಿ, ಮಾದ್ರೆ, ದುಂಡಳ್ಳಿ, ಎಡೆಹಳ್ಳಿ ಗ್ರಾಮಗಳ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ಎಬ್ಬಿಸುತ್ತಾ ಬೆಳೆ ನಾಶಪಡಿಸುತ್ತಿದ್ದು, ಬೆಳೆಗಾರರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಒಂದೂವರೆ ತಿಂಗಳಿನಿAದ ಕೂಜಗೇರಿ ಗ್ರಾಮದಲ್ಲಿ ಬೀಡುಬಿಟ್ಟಿ ರುವ ಆನೆಗಳು ಹಾಡಹಗಲೇ ತೋಟಗಳಲ್ಲಿ ಸುತ್ತಾಡುತ್ತಿದ್ದು, ರೈತರು ತೋಟಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಶನಿವಾರಸಂತೆ ವಲಯ ಅರಣ್ಯ ಇಲಾಖೆಯವರು ನೆರೆಯ ಹಾಸನ ಜಿಲ್ಲೆಯತ್ತ ಓಡಿಸಿದರೂ ರಾತ್ರಿ ವೇಳೆ ಪುನಃ ಆಗಮಿಸುತ್ತಿವೆ. ಆನೆಗಳನ್ನು ದೇವರ ಸಮಾನವೆಂದು ಭಾವಿಸಿರುವ ಕೆಲ ರೈತರು ಮೌನವಾಗಿದ್ದಾರೆ ಬೆಳೆ ಹಾನಿ ಪರಿಹಾರಕ್ಕೆ ಅರ್ಜಿ ಸಲ್ಲಿಸಲೂ ಮುಂದಾಗುತ್ತಿಲ್ಲ.
ವಲಯ ಅರಣ್ಯ ಇಲಾಖೆ ಯವರು ಆನೆಗಳನ್ನು ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದರೂ, ಜಿಲ್ಲಾ ಅರಣ್ಯಾಧಿಕಾರಿ, ಜಿಲ್ಲಾಧಿಕಾರಿಯವರು ಇತ್ತ ಗಮನ ಹರಿಸಬೇಕು. ಸಾಮಾನ್ಯವಾಗಿ ೨-೩ ಎಕರೆ ಜಮೀನು ಹೊಂದಿರುವ
(ಮೊದಲ ಪುಟದಿಂದ) ರೈತರೇ ಈ ಭಾಗದಲ್ಲಿರುವುದು. ಬೆಳೆ ನಾಶದಿಂದ ಮಕ್ಕಳ ವಿದ್ಯಾಭ್ಯಾಸ, ವಿವಾಹ, ಬ್ಯಾಂಕ್ ಸಾಲ, ಮನೆ ವ್ಯವಹಾರ ನಿಭಾಯಿಸುವುದು ಹೇಗೆ ಎಂದು ರೈತರಾದ ಕೆ.ಟಿ. ಹರೀಶ್, ಎಂ.ಪಿ. ಜಯಪ್ಪ, ಎಂ.ಕೆ. ಚಂದ್ರಪ್ಪ, ಎಂ.ಎA. ವಿಶ್ವನಾಥ್, ಎಂ.ಡಿ. ಹೇಮಂತ್, ಎಂ.ಕೆ. ದಿವಾಕರ್, ಎಂ.ಎA. ಲೋಕೇಶ್, ಎಂ.ವಿ. ಸುಮನ್, ಎಂ.ಕೆ. ತೇಜ್, ಡಿ.ಎಲ್. ಯೋಗೇಂದ್ರ, ಡಿ.ಎಸ್. ಸುರೇಶ್, ಡಿ.ಎನ್. ವಸಂತ್ ಅಳಲು ತೋಟಿಕೊಂಡಿದ್ದಾರೆ.