ಮಡಿಕೇರಿ, ಫೆ. ೨೫: ಬಾಡಗರಕೇರಿ ಗ್ರಾಮದಲ್ಲಿ ಹುಲಿ ದಾಳಿಗೆ ಜಾನುವಾರು ಬಲಿ ಯಾಗಿರುವ ಘಟನೆ ತಾ. ೨೩ ರ ರಾತ್ರಿ ನಡೆದಿದೆ. ಅಲ್ಲಿನ ನಿವಾಸಿ ಅಮ್ಮತ್ತೀರ ಚಂದ್ರಶೇಖರ್ ಅವರಿಗೆ ಸೇರಿದ ಎಮ್ಮೆ ಸನಿಹದ ತೋಟದಲ್ಲಿ ವ್ಯಾಘ್ರನ ದಾಳಿಗೆ ಬಲಿಯಾಗಿದ್ದು, ನಿನ್ನೆ ಇದು ಬೆಳಕಿಗೆ ಬಂದಿದೆ.

ಈ ಬಗ್ಗೆ ಶ್ರೀಮಂಗಲ ಅರಣ್ಯ ಇಲಾಖಾ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದರು. ಸ್ಥಳಕ್ಕೆ ಗ್ರಾ.ಪಂ. ಉಪಾಧ್ಯಕ್ಷ ಅಮ್ಮತ್ತೀರ ರಾಜೇಶ್, ಸದಸಸ್ಯೆ ಮಲ್ಲೇಂಗಡ ರೀನಾ ಭೇಟಿ ನೀಡಿದ್ದರು.

ನಿನ್ನೆ ಸಂಜೆ ಈ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯವರು ಕೂಂಬಿAಗ್ ನಡೆಸಿದರು. ಕಳೆದ ವರ್ಷವೂ ಚಂದ್ರಶೇಖರ್ ಅವರಿಗೆ ಸೇರಿದ ಜಾನುವಾರೊಂದು ಇದೇ ಜಾಗದ ಸನಿಹ ಹುಲಿ ದಾಳಿಗೆ ಬಲಿಯಾಗಿತ್ತು. ಈ ಘಟನೆಯಿಂದ ಒಂದಷ್ಟು ಆತಂಕ ಸೃಷ್ಟಿಯಾಗಿದೆ.