ಮಡಿಕೇರಿ, ಫೆ. ೨೪: ಕೇಂದ್ರ ಸರಕಾರದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಚರಂಡಿ ಕಾಮಗಾರಿ, ಪಂಚಾಯಿತಿ ಕೇಂದ್ರಗಳ ನಿರ್ಮಾಣ ಕಾಮಗಾರಿಗಳಿಗೆ ಒತ್ತು ನೀಡುವಂತೆ ಹಾಗೂ ಇದಕ್ಕೆ ಅನುಗುಣವಾಗಿ ಪರಿಷ್ಕೃತ ಕ್ರಿಯಾಯೋಜನೆಗಳನ್ನು ರೂಪಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಇಂದು ನಗರದ ಜಿ.ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಎಲ್ಲಾ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಪ್ರತಾಪ್ ಸಿಂಹ ಅವರು ನರೇಗಾ ಯೋಜನೆಗೆ ಸಂಬAಧಿಸಿದAತೆ ಪರಿಷ್ಕೃತ ಕ್ರಿಯಾಯೋಜನೆಯನ್ನು ೧ ವಾರದಲ್ಲಿ ಸಲ್ಲಿಸುವಂತೆ ತಾಲೂಕು ಇ.ಒ ಗಳಿಗೆ ಹೇಳಿದರು. ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಸ್ಮಶಾನಗಳ ಕೊರತೆಯಿದೆ. ನರೇಗಾ ಯೋಜನೆಯಡಿಯಲ್ಲಿ ಚಿತಾಗಾರ ನಿರ್ಮಾಣಕ್ಕೂ ಒತ್ತು ನೀಡುವಂತೆ ಆಗಬೇಕು ಎಂದು ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದರೊಂದಿಗೆ ಜಲ-ಜೀವನ್ ಮಿಷನ್ ಸಂಬAಧ ನೀರಿನ ಮೂಲ, ಟ್ಯಾಂಕ್ ನಿರ್ಮಾಣ ಇತ್ಯಾದಿಗಳನ್ನು ಗುರುತಿಸಿ ಪ್ರತಿ ಮನೆಗೂ ನಲ್ಲಿ ನೀರು ಸಂಪರ್ಕ ಕಲ್ಪಿಸುವಂತೆ ಸಂಬAಧಿಸಿದವರಿಗೆ ಸೂಚಿಸಿದರು. ಪಟ್ಟಿ-ತೊಡಿಕಾನ ರಸ್ತೆ, ಗಾಳಿಬೀಡು-ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆ, ಕೂಟಿಯಾಲ ಸೇತುವೆ ನಿರ್ಮಾಣ ತ್ವರಿತವಾಗಿ ಆಗಬೇಕಾಗಿದ್ದು, ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಹೊಂದಾಣಿಕೆ ಯೊಂದಿಗೆ ನಡೆದುಕೊಂಡು ಹೋಗುವಂತೆ ಸೂಚನೆ ನೀಡಿದರು.

ಪಂಚಾಯಿತಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಿ - ಸಿಂಹ

ಮಡಿಕೇರಿ ತಾಲೂಕಿನಲ್ಲಿನ ೨೬ ಪಂಚಾಯಿತಿಗಳ ಪೈಕಿ ಕೇವಲ ೧೪ ಪಂಚಾಯಿತಿಗಳಿಗೆ ಮಾತ್ರ ಸ್ವಂತ ಕಟ್ಟಡ ಇರುವುದಾಗಿ ಮಡಿಕೇರಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಶೇಖರ್ ಅವರು ಸಭೆಗೆ ಮಾಹಿತಿ ನೀಡಿದ್ದು, ನರೇಗಾ ಯೋಜನೆಯಡಿಯಲ್ಲಿ ಪಂಚಾಯಿತಿ ಕೇಂದ್ರ ನಿರ್ಮಾಣಕ್ಕೆ ಸಾಕಷ್ಟು ಅನುದಾನವಿದ್ದು, ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಿ ಕೇಂದ್ರಗಳ ನಿರ್ಮಾಣಕ್ಕೆ ಒತ್ತು ನೀಡಬೇಕಾಗಿ ಸಂಸದ ಪ್ರತಾಪ್ ಸಿಂಹ ಅವರು ಸೂಚಿಸಿದರು.

ಮಡಿಕೇರಿ ತಾಲೂಕಿಗೆ ನರೇಗಾ ಯೋಜನೆಯಡಿ ೨೦೨೧-೨೨ ನೇ ಸಾಲಿಗೆ ರೂ.೫ ಕೋಟಿ ೪೧ ಲಕ್ಷ ಮಂಜೂರಾಗಿದ್ದು, ಪ್ರಸ್ತುತ ವರ್ಷ ರೂ.೧೯ ಕೋಟಿ

(ಮೊದಲ ಪುಟದಿಂದ) ಮಂಜೂರಾತಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶೇಖರ್ ಸಭೆÀಗೆ ಮಾಹಿತಿ ಇತ್ತರು. ಅದೇ ರೀತಿ ಸೋಮವಾರಪೇಟೆ ತಾಲೂಕಿಗೆ ೨೦೨೧-೨೨ ನೇ ಸಾಲಿನಲ್ಲಿ ರೂ.೧೩ ಕೋಟಿ ಮಂಜೂರಾಗಿದ್ದು, ಈ ಸಾಲಿನಲ್ಲಿ ರೂ.೩೫ ಕೋಟಿ ಬಿಡುಗಡೆ ಸಂಬAಧ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ತಿಳಿಸಿದರು. ವೀರಾಜಪೇಟೆ ತಾಲೂಕಿಗೆ ೨೦೨೧-೨೨ ಸಾಲಿನಲ್ಲಿ ರೂ.೧೦ ಕೋಟಿ ಮಂಜೂರಾಗಿದ್ದು, ಈ ಸಾಲಿನಲ್ಲಿ ರೂ.೨೪ ಕೋಟಿಗೆ ಕ್ರಿಯಾಯೋಜನೆಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿರುವುದಾಗಿ ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಅವರು ಹೇಳಿದರು.

ಜಿಲ್ಲೆಯ ಹಲವಷ್ಟು ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಮಾಡಲು ಘಟಕಗಳೇ ಇಲ್ಲದಿರುವುದಾಗಿ ಸಂಬAಧಿಸಿದ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದ್ದು, ನರೇಗಾ ಯೋಜನೆಯಡಿಯಲ್ಲಿ ಕಸ ವಿಲೇವಾರಿ ನಿರ್ಮಾಣಕ್ಕೂ ಒತ್ತು ನೀಡಿ ಜಾಗದ ಸಮಸ್ಯೆಗಳಿದ್ದರೆ ಶೀಘ್ರದಲ್ಲಿಯೇ ಶಾಸಕರ ಸಮ್ಮುಖದಲ್ಲಿ ಬಗೆಹರಿಸುವಂತೆ ಪ್ರತಾಪ್ ಸಿಂಹ ಅವರು ಸೂಚಿಸಿದರು.

ಕಸ ವಿಲೇವಾರಿ ವಾಹನಗಳ ಕೊರತೆ ಬಗ್ಗೆ ಗಮನ ಸೆಳೆದ ಶಾಸಕ ಅಪ್ಪಚ್ಚು ರಂಜನ್, ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನಲ್ಲಿ ಕೆಲವೆಡೆಗಳಲ್ಲಿ ಪಿಕ್-ಅಪ್ ವಾಹನಗಳ ಬಳಕೆ ಮಾಡುವಂತೆ, ಸಂಬAಧಿಸಿದ ಪಂಚಾಯಿತಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪರಿಷ್ಕೃತ ಕ್ರಿಯಾಯೋಜನೆ ತಯಾರಿಸಿ - ಸಂಸದ

ಕಾAಕ್ರಿಟ್ ರಸ್ತೆ ನಿರ್ಮಾಣ, ತ್ಯಾಜ್ಯ ವಿಲೇವಾರಿ ಘಟಕ, ಚಿತಾಗಾರ ನಿರ್ಮಾಣ, ಪಂಚಾಯಿತಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳನ್ನು ಒಳಗೊಂಡAತೆÀ ಪರಿಷೃತ ಕ್ರಿಯಾಯೋಜನೆಗಳನ್ನು ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಸಂಬAಧಿಸಿದ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಒನ್ ಸೆಂಟರ್ ಉಪಯೋಗಿಸಿ - ರಂಜನ್

ಪAಚಾಯಿತಿಗಳ ಸೇವೆಗಳ ಸದುಪಯೋಗಕ್ಕೆ ಗ್ರಾಮ ಒನ್ ಸೆಂಟರ್ ಬಳಕೆಗೆ ಒತ್ತು ನೀಡುವಂತಾಗಬೇಕೆAದ ಶಾಸಕ ಅಪ್ಪಚ್ಚು ರಂಜನ್, ಪಂಚಾಯಿತಿ ಕಟ್ಟಡದೊಳಗೆ ಈ ಸೇವಾ ಕೇಂದ್ರವನ್ನು ಪ್ರಾರಂಭಿಸುವAತಾಗಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ ಅವರು, ನಿಯಮದ ಪ್ರಕಾರ ಇದು ಪಂಚಾಯಿತಿ ಕಟ್ಟಡದೊಳಗೆ ಇರಲು ಸಾಧ್ಯವಿಲ್ಲ. ಖಾಸಗಿ ಅವರು ತಮ್ಮ ಸೇವಾ ಕೇಂದ್ರಗಳ ಮೂಲಕ ಗ್ರಾಮ ಒನ್ ಸೆಂಟರ್ ಮೂಲಕ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡುತ್ತಾರೆ. ಪಂಚಾಯಿತಿ ನಿರ್ವಹಣೆಯ ಕೇಂದ್ರದಲ್ಲಿ ಎಲ್ಲಾ ಸೇವೆಗಳು ಲಭ್ಯವಿರುವುದಿಲ್ಲ ಎಂದರು.

ಕಟ್ಟಡ ಆವರಣದ ಸಮೀಪದಲ್ಲಿಯೇ ಖಾಸಗಿಯವರಿಗೆ ಸೇವಾ ಕೇಂದ್ರ ನಿರ್ಮಿಸಿ ಪಂಚಾಯಿತಿಗೆ ಆಗಮಿಸುವ ಎಲ್ಲಾ ಸಾರ್ವಜನಿಕರಿಗೆ ಪಂಚಾಯಿತಿಯ ಎಲ್ಲಾ ಸೇವೆಗಳು ತಲುಪಿಸುವಂತೆ ಮಾಡಬೇಕು ಎಂದು ಸಂಸದರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒ ಭಂವರ್ ಸಿಂಗ್ ಮೀನಾ ಅವರಿಗೆ ಸೂಚಿಸಿದರು.

ಸ್ಮಶಾನಗಳ ಕೊರತೆ

ಜಿಲ್ಲೆಯಲ್ಲಿ ಸ್ಮಶಾನಗಳ ಕೊರತೆ ಬಗ್ಗೆ ಗಮನ ಸೆಳೆದ ಪ್ರತಾಪ್ ಸಿಂಹ, ಪ್ರಮುಖವಾಗಿ ಮಳೆಗಾಲದಲ್ಲಿ ದೇಹದಹನ ಕ್ರಿಯೆ ಮಾಡಲು ಕಷ್ಟಸಾಧ್ಯವಾಗುತ್ತದೆ. ಆದುದರಿಂದ ಚಿತಾಗಾರ ನಿರ್ಮಾಣಕ್ಕೆ ನರೇಗಾ ಯೋಜನೆಯ ಮೂಲಕ ಒತ್ತು ನೀಡಬೇಕೆಂದರು. ಇದಕ್ಕೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು, ಹೆಚ್ಚು ಜನಸಂಖ್ಯೆಯುಳ್ಳ ಅಮ್ಮತ್ತಿಯಲ್ಲಿ ಆಧುನಿಕ ಚಿತಾಗಾರವುಳ್ಳ ಸ್ಮಶಾನ ನಿರ್ಮಾಣವಾಗಬೇಕೆಂದು ಒತ್ತಾಯಿಸಿದರು.

ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತು

ಈಗಾಗಲೇ ಬೇಸಿಗೆ ಪ್ರಾರಂಭವಾಗಿದ್ದು, ನೀರಿನ ಸಮಸ್ಯೆ ಎದುರಾಗದಂತೆ, ನಗರ, ಹಳ್ಳಿಗಳಿಗೆ ನೀರು ಸರಬರಾಜು ಆಗಬೇಕು. ನೀರಿನ ಮೂಲಗಳಲ್ಲಿ ಒಂದಾದ ಬೋರವೆಲ್‌ನಿಂದ ನೀರು ಸರಬರಾಜಾಗಲು ಸೆಸ್ಕ್ ಇಲಾಖೆ ಬಾಕಿ ಇರುವ ಬೋರ್‌ವೆಲ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕಾಗಿ ಶಾಸಕ ರಂಜನ್ ತಿಳಿಸಿದರು. ಹಟ್ಟಿಹೊಳೆ, ಬೇತ್ರಿಯಂತಹ ನೈಸರ್ಗಿಕ ನೀರಿನ ಮೂಲಗಳನ್ನು ಬಳಸಿ ನೀರು ಸರಬರಾಜು ಪೂರೈಕೆಗೆ ಕ್ರಮ ವಹಿಸುವಂತೆಯೂ ಅವರು ಸಲಹೆ ಇತ್ತರು.

ಒಂಟಿಯAಗಡಿ, ಹಚ್ಚಿನಾಡು ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸುಜಾ ಕುಶಾಲಪ್ಪ ಅವರು ಈ ಸಂದರ್ಭ ಗಮನ ಸೆಳೆದರು.

ಲಕ್ಷö್ಮಣತೀರ್ಥದಲ್ಲಿ ಚೆಕ್‌ಡ್ಯಾಮ್ ಅಳವಡಿಸಿ ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರು ಸಿಗುವಂತೆ ಕ್ರಮ ವಹಿಸಬೇಕಾಗಿ ಕೆ.ಡಿ.ಪಿ ದಿಶಾ ಸಮಿತಿ ನಾಮನಿರ್ದೇಶಿತ ಸದಸ್ಯೆ ಯಮುನಾ ಚಂಗಪ್ಪ ಅವರು ಮನವಿ ಮಾಡಿದರು.

ವೀರಾಜಪೇಟೆಯಲ್ಲಿ ನೀರು ಸರಬರಾಜು, ಪೂರೈಕೆ ಸಂಬAಧ ಮಾಹಿತಿ ನೀಡಿದ ಒಳಚರಂಡಿ ಹಾಗೂ ನಗರ ನೀರು ಸರಬರಾಜು ಇಲಾಖೆಯ ಅಧಿಕಾರಿ, ಅಲ್ಲಿನ ಅಯ್ಯಪ್ಪ ಬೆಟ್ಟದಲ್ಲಿ ನೀರು ಶೇಖರಣಾ ಘಟಕ ನಿರ್ಮಿಸಿದರೆ, ನಗರದಲ್ಲಿ ಇತರ ೬ ಶೇಖರಣಾ ಘಟಕಗಳು ನಿರ್ಮಾಣ ಮಾಡುವ ಕಾರ್ಯ ತಪ್ಪುತ್ತದೆ ಎಂದರು. ಭೂವೈಜ್ಞಾನಿಕ ಇಲಾಖೆಯಿಂದ ಪರಿಶೀಲನೆ ನಡೆಸಿ ಬೆಟ್ಟದಲ್ಲಿ ಶೇಖರಣಾ ಘಟಕ ನಿರ್ಮಿಸುವ ಸಂಬAಧ ವರದಿ ನೀಡುವಂತಾಗಬೇಕು ಎಂದು ಸಿಂಹ ಅವರು ಹೇಳಿದರು.

ಜೋಡುಪಾಲ ಬಳಿ ೪ ಪಥ ರಸ್ತೆ

ರಾಷ್ಟಿçÃಯ ಹೆದ್ದಾರಿ ವಿಭಾಗದ ಇಂಜಿನಿಯರ್ ನಾಗರಾಜು ಅವರು ಮಾತನಾಡಿ, ಕುಶಾಲನಗರದಿಂದ ಸಂಪಾಜೆ ವರೆಗೆ ೨೨ ಕಡೆ ತಡೆಗೋಡೆ ಹಾಗೂ ಸೇತುವೆ ನಿರ್ಮಾಣ, ಜೊತೆಗೆ ಹೆಚ್ಚುವರಿಯಾಗಿ ೬ ಕಡೆ ತಡೆಗೋಡೆ ನಿರ್ಮಾಣ ಮಾಡಲಾಗುತ್ತದೆ ಎಂದರು. ಜೋಡುಪಾಲ ಬಳಿ ೪ ಪಥ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸುವಂತೆ ಸಂಸದರು ಸೂಚಿಸಿದರು.

ರಸ್ತೆ ಗುಣಮಟ್ಟ ಕಾಪಾಡಿ - ರಂಜನ್

ಪ್ರಧಾನಮAತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣವಾಗಿರುವ ರಸ್ತೆ ಕಳಪೆಯಾಗಿರುವುದಾಗಿ ಹಲವಷ್ಟು ದೂರುಗಳು ಈಗಾಗಲೇ ಸಾರ್ವಜನಿಕರಿಂದ ಬಂದಿದೆ. ರಸ್ತೆ ನಿರ್ಮಾಣ ಸಂದರ್ಭ ಗುಣಮಟ್ಟ ಕಾಯ್ದುಕೊಳ್ಳದೇ ಇದ್ದರೆ ಮುಂಬಡ್ತಿ ನೀಡುವುದಿಲ್ಲ ಎಂದು ಅಧಿಕಾರಿ ಪ್ರಭು ಅವರಿಗೆ ಶಾಸಕ ರಂಜನ್ ಎಚ್ಚರಿಸಿದರು. ಈ ಯೋಜನೆಯಡಿಯಲ್ಲಿ ೩ನೇ ಹಂತದಲ್ಲಿ ರಾಜ್ಯಕ್ಕೆ ರೂ.೫,೬೦೦ ಕೋಟಿ ಬಿಡುಗಡೆಯಾಗಿದ್ದು, ಸಮರ್ಪಕ ಬಳಕೆಯಾಗಬೇಕೆಂದು ಸಂಸದ ಸಿಂಹ ಅಭಿಪ್ರಾಯ ಪಟ್ಟರು.

ದಕ್ಷಿಣ ಕೊಡಗಿನಲ್ಲಿ ನಿರಂತರ ವಿದ್ಯುತ್ ಸಮಸ್ಯೆ

ದಕ್ಷಿಣ ಕೊಡಗಿನಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಆಗುತ್ತಿದ್ದು, ಪ್ರಮುಖವಾಗಿ ಬಾಳೆಲೆ ಗ್ರಾಮದಲ್ಲಿ ಸಂಜೆ ೬ ಗಂಟೆಯಿAದ ರಾತ್ರಿ ೧೧ ಗಂಟೆಯವರೆಗೆ ವಿದ್ಯುತ್ ಕಡಿತಗೊಳಿಸಲಾಗುತ್ತದೆ. ಪರೀಕ್ಷೆ ಕೂಡ ಸಮೀಪಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಓದಲು ಅಸಾಧ್ಯವಾಗುತ್ತಿದೆ ಎಂದು ಯಮುನಾ ಚಂಗಪ್ಪ ಸಭೆಯಲ್ಲಿ ಪ್ರಸ್ತಾಪಿಸಿದ್ದು, ವಿದ್ಯುತ್ ಸಮಸ್ಯೆ ಸರಿಪಡಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.

ಟಿ.ಶೆಟ್ಟಿಗೇರಿಯಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ಫಾರ್ಮರ್ ೬ ತಿಂಗಳುಗಳಾದರು ಚಾಲ್ತಿಯಲಿಲ್ಲ. ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸುಜಾ ಕುಶಾಲಪ್ಪ ಅವರು ಸೆಸ್ಕ್ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದಿAದ ಗುಡ್ಡೆಹೊಸೂರು ವರೆಗಿನ ಸುಮಾರು ೮೨ ಕಿ.ಮೀ ಮಾರ್ಗದುದ್ದಕ್ಕೆ ವಿದ್ಯುತ್ ಲೈನ್ ಅಳವಡಿಕೆಗೆ ಕ್ರಮ ವಹಿಸುವಂತೆ ಸಂಸದರು ಸೆಸ್ಕ್ ಇಇ ಅಶೋಕ್ ಅವರಿಗೆ ಸೂಚನೆ ನೀಡಿದರು.

ತಿತಿಮತಿ ಬಳಿ ರೈಲ್ವೇ ಕಂಬಿ ಸಮಸ್ಯೆ

ತಿತಿಮತಿ ಬಳಿ ಆನೆ ಹಾವಳಿ ತಡೆಗಾಗಿ ರೈಲ್ವೇ ಕಂಬಿ ಅಳವಡಿಕೆಗೆ ಹಾಡಿ ಕುಟುಂದಿAದಾಗಿ ಅಡೆತಡೆಯಾಗಿದೆ. ಕಾಡಂಚಿನಿAದ ರಸ್ತೆ ದಾಟಿ ಕಾಡಾನೆಗಳು ಬರಬಾರದೆಂದು ರಸ್ತೆ ಬದಿಗೆ ಕಂಬಿ ಅಳವಡಿಸಬೇಕು. ಆದರೆ, ರಸ್ತೆ ಸಮೀಪವೇ ಇರುವ ಕಾಡಂಚಿನಲ್ಲಿ ಹಾಡಿ ಕುಟುಂಬವೊAದಿದ್ದು, ಕಂಬಿಯನ್ನು ಅವರ ನಿವಾಸದ ಹಿಂದಕ್ಕಾಗಿ ಅಳವಡಿಸುವಂತೆ ಆಗ್ರಹಿಸುತ್ತಿದ್ದಾರೆ. ಈ ರೀತಿ ಮಾಡಿದರೆ ೧.೫ ಕಿ.ಮೀ ನಷ್ಟು ಹೆಚ್ಚುವರಿ ದೂರ ಸೇರಿಸಿ ಕ್ರಿಯಾಯೋಜನೆ ತಯಾರಿಸಬೇಕೆಂದು ಎ.ಸಿ.ಎಫ್ ಪೂವಯ್ಯ ಅವರು ಮಾಹಿತಿ ನೀಡಿದರು. ಪರಿಷ್ಕೃತ ಕ್ರಿಯಾಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ತಿಳಿಸಿದರು.

ಗ್ರೇಟರ್ ರಾಜಾಸೀಟು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ

ರಾಷ್ಟಿçÃಯ ತೋಟಗಾರಿಕಾ ಮಿಷನ್ ಅಭಿಯಾನದಡಿ ಗ್ರೇಟರ್ ರಾಜಾಸೀಟು ಯೋಜನಾ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ಅಪ್ಪಚ್ಚುರಂಜನ್ ಅವರು ಸೂಚಿಸಿದರು. ಎನ್.ಡಿ.ಆರ್.ಎಫ್ ನಿಂದ ರೂ.೧೦೪ ಕೋಟಿ ಪರಿಹಾರ ಬಿಡುಗಡೆಯಾಗಿದ್ದು, ಕಾಫಿ ಮಂಡಳಿ ಹಾಗೂ ಸಂಬಾರ ಮಂಡಳಿ ಮೂಲಕ ರೈತರಿಗೆ ಬೆಳೆಹಾನಿ ಪರಿಹಾರ ತಲುಪಿಸುವಂತೆ ಸಂಸದರು ಸೂಚಿಸಿದರು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಹೆಚ್ಚಿನ ಜನರಿಗೆ ಸೌಲಭ್ಯ ಕಲ್ಪಿಸುವಂತೆ ಕೃಷಿ ಇಲಾಖೆ ಅಧಿಕಾರಿ ಶಭಾನಾ ಶೇಖ್ ಅವರಿಗೆ ನಿರ್ದೇಶನ ನೀಡಿದರು.

ಅರಣ್ಯ, ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾನೂನು ಪ್ರಕಾರವೇ ಕೆಲಸ ಮಾಡುವಂತೆ ರವಿ ಕುಶಾಲಪ್ಪ ಅವರು ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರು ಸಂಬAಧಪಟ್ಟ ಇಲಾಖೆಗಳು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ನಾಮನಿರ್ದೇಶಿತ ಸದಸ್ಯರಾದ ಚಂದ್ರಕಲಾ, ಗಿರೀಶ್ ಬೋಪಣ್ಣ, ಎಂ.ಅಯ್ಯಪ್ಪ, ಚೆಲುವರಾಜು, ನಂದಿನಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು ಇತರರು ಇದ್ದರು.

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸಂಸದರು ಮಾಹಿತಿ ಪಡೆದರು. ಈ ಬಗ್ಗೆ ಶಿಕ್ಷಣಾಧಿಕಾರಿ ಕಾಂತರಾಜು ಮಾಹಿತಿ ನೀಡಿ, ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಏರ್ಪಡಿಸಲಾಗಿದೆ. ಪ್ರತೀ ತಾಲೂಕಿನಲ್ಲಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ವಿಷಯವಾರು ಕೈಪಿಡಿ ಮುದ್ರಿಸಿ ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.