ವೀರಾಜಪೇಟೆ, ಫೆ. ೨೬: ಕೃಷಿಕರು ತಮ್ಮ ಜಾಗದ ಮಣ್ಣನ್ನು ಪರೀಕ್ಷೆ ಮಾಡಿಸಿಕೊಂಡು ಭೂಮಿಯ ಆರೋಗ್ಯವನ್ನು ಪ್ರತಿಯೊಬ್ಬ ರೈತ ಕಾಪಾಡಿಕೊಂಡಲ್ಲಿ ಉತ್ತಮ ಬೆಳೆ ಸಾಧ್ಯ ಎಂದು ಓಡಿಪಿ ಸಂಸ್ಥೆಯ ವಲಯ ಸಂಯೋಜಕ ಮೈಸೂರಿನ ಜಾನ್ ಬಿ. ರಾಡ್ರಿಗಾಸ್ ಹೇಳಿದರು.

ವೀರಾಜಪೇಟೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಓಡಿಪಿ ಸಂಸ್ಥೆ ಮೈಸೂರು, ಅಂದೇರಿ ಹಿಲ್ಪೆ ಜರ್ಮನಿ ಇವರ ಸಹಯೋಗದಲ್ಲಿ ಓಡಿಪಿ ರೈತ ಸದಸ್ಯರಿಗೆ ರಸಗೊಬ್ಬರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಓಡಿಪಿ ಸಂಸ್ಥೆ ಮಾನವ ಸಮಗ್ರ ಅಭಿವೃದ್ಧಿಗೆ ಸುಮಾರು ೨೩ ವರ್ಷಗಳಿಂದ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಸೇರಿ ೧೫ ರಿಂದ ೨೦ ಸಾವಿರ ರೈತ ಸದಸ್ಯರಿಗೆ ಉಚಿತ ರಸಗೊಬ್ಬರ ನೀಡುವ ಮೂಲಕ ಕೃಷಿಕರಿಗೆ ಸ್ಪಂದಿಸುವAತ ಕಾರ್ಯ ಮಾಡುತ್ತ ಬಂದಿದೆ. ಸಂಸ್ಥೆಯ ೪೫೦ ಘಟಕಗಳಿದ್ದು. ೩೦ ರೈತ ಉತ್ಪನ್ನ ಕೂಟಗಳ ಮೂಲಕ ರೈತ ಸದಸ್ಯರಿಗೆ ಸೌಲಭ್ಯಗಳನ್ನು ವಿತರಿಸಲಾಗುವುದು ಎಂದರು.

ವೀರಾಜಪೇಟೆ ಯೂನಿಯನ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ, ಸ್ವ ಉದ್ಯೋಗ ಮಾಡುವಂತ ಸಂಘದ ಸದಸ್ಯರುಗಳಿಗೆ ಸರ್ಕಾರದ ಯೋಜನೆ ಯಲ್ಲಿ ಬ್ಯಾಂಕ್ ಸಾಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುವುದು. ಸಾಲ ಪಡೆದ ಸದಸ್ಯರು ಆದಾಯವನ್ನು ಹೆಚ್ಚಿಸಿಕೊಂಡು ಅಭಿವೃದ್ಧಿ ಹೊಂದುವAತಾಗಬೇಕು ಎಂದರು.

ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಮಾತನಾಡಿ ಸರ್ಕಾರದ ಯೋಜನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನ ವಾಡಿಯಲ್ಲಿ ನೀಡುತ್ತಿರುವ ಸೌಲಭ್ಯ ಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದರು.

ಸAಸ್ಥೆಯ ಕೊಡಗು ವಲಯ ಸಂಯೋಜಕಿ ಜಾಯ್ಸಿ ಮೇನೆಜಸ್ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮೀಣ ಭಾಗದ ಜನರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಓಡಿಪಿ ಸಂಸ್ಥೆ ಜಾರಿಗೆ ತಂದಿದೆ. ರೈತ ಸದಸ್ಯರು ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯತ್ತ ಸಾಗುವಂತಾಗಬೇಕು ಎಂದರು. ವೇದಿಕೆಯಲ್ಲಿ ಸದಸ್ಯೆ ರೇಷ್ಮ, ರೀಟಾ ಜೋಸೆಪ್, ಬಿ.ಆರ್. ಅನಿಲ್‌ಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ೬೬ ರೈತ ಸದಸ್ಯರಿಗೆ ರಸಗೊಬ್ಬರ ವಿತರಿಸಲಾಯಿತು.