ಮುಳ್ಳೂರು, ಫೆ. ೨೬: ಸಮೀಪದ ಶನಿವಾರಸಂತೆ ಶ್ರೀಮಂಜುನಾಥಸ್ವಾಮಿ ಪಾದಯಾತ್ರೆ ಸಮಿತಿ ವತಿಯಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಬೆಳೆಸುವ ಮೂಲಕ ಚಾಲನೆ ನೀಡಲಾಯಿತು.

೨೪ನೇ ವರ್ಷದ ಪಾದಯಾತ್ರೆ ಕಾರ್ಯಕ್ರಮಕ್ಕೆ ಸಮಿತಿಯ ತಂಡ ಶನಿವಾರಸಂತೆ ಶ್ರೀಗಣಪತಿ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಪಾದಯಾತ್ರೆಯಲ್ಲಿ ಪುರುಷರು, ಮಹಿಳೆಯರು, ಯುವಕರು, ಯುವತಿಯರು, ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನ ಭಕ್ತರು ಪಾಲ್ಗೊಂಡಿದ್ದಾರೆ. ಪಾದಯಾತ್ರಿಗಳು ಶನಿವಾರಸಂತೆ ಕೆಆರ್‌ಸಿ ವೃತ್ತದ ಮೂಲಕ ಚಂಗಡಹಳ್ಳಿ, ಉಚ್ಚಂಗಿ, ಕೂಡುರಸ್ತೆ, ವನಗೂರು, ಬಿಸ್ಲೆ, ಸುಬ್ರಹ್ಮಣ್ಯ, ಕಡಬ ರಸ್ತೆ, ಮಾರ್ದಾಳ, ಇಂಜಲAಪಾಡಿ ಹೊಳೆ, ಕೊಕ್ಕಡ, ಸೌತಡ್ಕ ಮಾರ್ಗದಲ್ಲಿ ಪಾದಯಾತ್ರೆ ಮಾಡಲಿರುವ ತಂಡವು ಮಾ. ೧ ರಂದು ಮಹಾಶಿವರಾತ್ರಿ ಹಬ್ಬದ ದಿನ ಶ್ರೀಕ್ಷೇತ್ರ ಧರ್ಮಸ್ಥಳ ತಲುಪಲಿದೆ ಎಂದು ಪಾದಯಾತ್ರೆ ಸಮಿತಿ ಪ್ರಮುಖ ಎ.ಡಿ.ಮೋಹನ್‌ಕುಮಾರ್ ಹೇಳಿದರು.