೨೧೯ ಭಾರತೀಯರಿಗೆ ವೈಮಾನಿಕ ಯಾನ
ನವದೆಹಲಿ, ಫೆ. ೨೬: ರಷ್ಯಾದ ದಾಳಿಯಿಂದಾಗಿ ತತ್ತರಿಸಿರುವ ಯುದ್ಧ ಬಾಧಿತ ಉಕ್ರೇನ್ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆ ತರುವ ಕಾರ್ಯ ಚುರುಕುನಿಂದ ಸಾಗಿದೆ. ೨೧೯ ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ರೊಮೇನಿಯಾದಿಂದ ಮುಂಬೈಗೆ ಹೊರಟಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ತಿಳಿಸಿದ್ದಾರೆ.
ರೂ. ೧೦೦೦ ಕೋಟಿ ಮೌಲ್ಯದ ನಗದು, ಡ್ರಗ್ಸ್, ಮದ್ಯ ವಶ!
ನವದೆಹಲಿ, ಫೆ. ೨೬: ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಿರುವ ಕೇಂದ್ರ ಚುನಾವಣಾ ಆಯೋಗವು ಇದುವರೆಗೆ ೧,೦೦೦ ಕೋಟಿ ರೂಪಾಯಿಗೂ ಹೆಚ್ಚು ನಗದು, ಡ್ರಗ್ಸ್, ಮದ್ಯವನ್ನು ವಶಪಡಿಸಿಕೊಂಡಿದ್ದು, ಇದು ೨೦೧೭ರ ಬಳಿಕ ವಶಪಡಿಸಿಕೊಂಡಿದ್ದಕ್ಕಿAತ ನಾಲ್ಕು ಪಟ್ಟು ಹೆಚ್ಚಾಗಿದೆ. ಚುನಾವಣಾ ಆಯೋಗದ ಪ್ರಕಾರ, ಅತೀ ಹೆಚ್ಚು ಹಣ ವಶಪಡಿಸಿಕೊಂಡ ರಾಜ್ಯಗಳ ಪೈಕಿ ಪಂಜಾಬ್ ಅಗ್ರಸ್ಥಾನದಲ್ಲಿದ್ದು ಒಟ್ಟು ರೂ.೫೧೦.೯೧ ಕೋಟಿ ವಶಪಡಿಸಿಕೊಳ್ಳಲಾಗಿದೆ. ಉತ್ತರ ಪ್ರದೇಶದಲ್ಲಿ (೩೦೭.೯೨ ಕೋಟಿ), ಮಣಿಪುರದಲ್ಲಿ (೧೬೭.೮೩ ಕೋಟಿ), ಉತ್ತರಾಖಂಡದಲ್ಲಿ (೧೮.೮೧ ಕೋಟಿ) ಮತ್ತು ಗೋವಾದಲ್ಲಿ (೧೨.೭೩ ಕೋಟಿ) ವಶಪಡಿಸಿಕೊಳ್ಳಲಾಗಿದೆ.
‘ನನ್ನ ಪಾಲಿಸಿ ನನ್ನ ಕೈಯಲ್ಲಿ’
ಬೆಂಗಳೂರು, ಫೆ. ೨೬: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಜೊತೆಗೆ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು "ನನ್ನ ಪಾಲಿಸಿ ನನ್ನ ಕೈಯಲ್ಲಿ" ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನ ಪ್ರಾರಂಭಿಸಲಾಗುವುದು ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನ ಜಿಕೆವಿಕೆಯ ಬಿ.ಹೆಚ್.ಎಸ್. ಕಾಲೇಜಿನ ಆಡಿಟೋರಿಯಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಸಚಿವರು ಮಾತನಾಡಿದರು. ಪ್ರಾಕೃತಿಕ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ನಮ್ಮ ಸಂಕಲ್ಪವಾಗಿದೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಯೋಜನೆ ಇದಾಗಿದೆ. ಹಿಂಗಾರು ೨೦೨೧-೨೨ರ ಹಂಗಾಮಿನಲ್ಲಿ ನೋಂದಣಿ ಮಾಡಿದಂತಹ ರೈತರಿಗೆ ತಮ್ಮ ಪಾಲಿಸಿ ವಿವರವನ್ನು ಇನ್ಲ್ಯಾಂಡ್ ಲೆಟರ್ ನಮೂನೆಯಲ್ಲಿ ವಿತರಿಸುವ ಕಾರ್ಯಕ್ರಮವಿದೆ. ಈಗ ರಾಜ್ಯದ ಲಕ್ಷಾಂತರ ರೈತರು "ನನ್ನ ಪಾಲಿಸಿ ನನ್ನ ಕೈಯಲ್ಲಿ" ಎಂದು ಹೇಳಿಕೊಳ್ಳಬಹುದು ಎಂದು ಹೇಳಿದರು.
ರಷ್ಯಾ ಆಕ್ರಮಣ: ೧೯೮ ಜನರ ಸಾವು
ಕೈವ್, ಫೆ. ೨೬: ರಷ್ಯಾ- ಉಕ್ರೇನ್ ಯುದ್ಧ ಆರಂಭವಾದಾಗಿನಿAದ ಇಲ್ಲಿಯವರೆಗೂ ಮೂವರು ಮಕ್ಕಳು ಸೇರಿದಂತೆ ಒಟ್ಟಾರೆ ೧೯೮ ಉಕ್ರೇನ್ ಪ್ರಜೆಗಳು ಸಾವನ್ನಪ್ಪಿರುವುದಾಗಿ ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಸ್ಕೊ ಹೇಳಿದ್ದಾರೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೂ ಉಂಟಾಗಿರುವ ನಷ್ಟದ ವಿವರಗಳನ್ನು ಲಿಯಾಸ್ಕೋ ಫೇಸ್ ಬುಕ್ನಲ್ಲಿ ಫೋಸ್ಟ್ ಮಾಡಿದ್ದಾರೆ. ಮೂರು ದಿನಗಳ ಹೋರಾಟದಲ್ಲಿ ೧,೧೧೫ ಉಕ್ರೇನ್ ಪ್ರಜೆಗಳು ಗಾಯಗೊಂಡಿದ್ದಾರೆ. ಇದರಲ್ಲಿ ೩೩ ಮಕ್ಕಳು ಕೂಡಾ ಸೇರಿದ್ದಾರೆ ಎಂದು ಅವರು ಹೇಳಿರುವುದಾಗಿ ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ರಷ್ಯಾ ಗುರುವಾರದಿಂದ ಉಕ್ರೇನ್ನಲ್ಲಿ ದಾಳಿ ನಡೆಸುತ್ತಿದ್ದು, ಅಲ್ಲಿನ ಮಿಲಿಟರಿ ಮೂಲಸೌಕರ್ಯಗಳನ್ನು ನಾಶಪಡಿಸುತ್ತಿದೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಪಾಶ್ಚಿಮಾತ್ಯ ರಾಷ್ಟçಗಳು ಖಂಡಿಸಿದ್ದು, ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಹೇರುತ್ತಿವೆೆ. ನಿರ್ಬಂಧ, ರಕ್ಷಣಾ ನೆರವು ಮತ್ತು ಯುದ್ಧ ವಿರೋಧಿ ಮೈತ್ರಿ ಕುರಿತಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಶುಕ್ರವಾರ ಅಮೆರಿಕ ಅಧ್ಯಕ್ಷ ಜೋ-ಬೈಡನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ತನ್ನ ಮೌಲ್ಯಗಳನ್ನು ಹಂಚಿಕೊಳ್ಳುವ ಯುರೋಪಿಯನ್ ರಾಷ್ಟçಗಳಿಗೆ ಯಾವಾಗಲೂ ನ್ಯಾಟೋದ ಬಾಗಿಲು ತೆರೆದಿರುತ್ತದೆ ಎಂದು ಬೈಡನ್ ಶುಕ್ರವಾರ ಹೇಳಿದರು.