ಮಡಿಕೇರಿ, ಫೆ. ೨೬: ತಾ. ೨೭ರಂದು (ಇಂದು) ರಾಷ್ಟಿçÃಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುವುದರಿಂದ ಕೋವಿಡ್-೧೯ ಲಸಿಕಾ ಶಿಬಿರ ಇರುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಪಲ್ಸ್ ಪೋಲಿಯೋ ಇರುವುದರಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಕೋವಿಡ್-೧೯ ಶಿಬಿರ ನಡೆಸಲಾಗುವುದಿಲ್ಲ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ.