ಕ್ರೀಡಾ ಪ್ರೇಮಿಗಳ ನಿರೀಕ್ಷೆ
ಮಡಿಕೇರಿ, ಫೆ. ೨೫: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ ತಿಂಗಳಲ್ಲಿ ೨೦೨೨-೨೩ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಬೊಮ್ಮಾಯಿ ಅವರ ಬಜೆಟ್‌ನತ್ತ ಎಲ್ಲರ ಚಿತ್ತ ನೆಟ್ಟಿದೆ. ಜಿಲ್ಲೆಯ ಜನರಲ್ಲಿ ಬಜೆಟ್ ಕುರಿತು ನಿರೀಕ್ಷೆಗಳು ಹುಟ್ಟಿಕೊಳ್ಳುತ್ತಿದೆ. ಕೊಡಗು ಜಿಲ್ಲೆಗೆ ಸಿಗಬೇಕಾದ ಹೊಸ ಯೋಜನೆಗಳ ಕುರಿತು ಚರ್ಚೆಗಳು ಪ್ರಾರಂಭವಾಗಿದೆ. ಇದರಲ್ಲಿ ಪ್ರಮುಖವಾದದ್ದು ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ. ಬಜೆಟ್‌ನಲ್ಲಿ ಜಿಲ್ಲೆಗೆ ಕ್ರೀಡಾ ವಿ.ವಿ. ಘೋಷಣೆ ಮಾಡಬೇಕೆಂದು ಜಿಲ್ಲೆಯ ಜನರು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮನವಿಗಳನ್ನೂ ಸಲ್ಲಿಸಲಾಗಿದೆ.
ಕೊಡಗು ಜಿಲ್ಲೆ ಅಪ್ರತಿಮ ಕ್ರೀಡಾ ಸಾಧಕರನ್ನು ರಾಜ್ಯ, ರಾಷ್ಟç ಹಾಗೂ ಅಂರ‍್ರಾಷ್ಟಿçÃಯ ಮಟ್ಟಕ್ಕೆ ಸಮರ್ಪಿಸಿದೆ. ಕೊಡಗು ಜಿಲ್ಲೆಯ ಜನರಲ್ಲಿ ಕ್ರೀಡೆ ಎಂಬುದು ರಕ್ತಗತವಾಗಿ ಬಂದಿದೆ. ಆದರೆ ಕೊಡಗು ಕ್ರೀಡಾ ಜಿಲ್ಲೆಯಾದರೂ ಸಹಾ ಕ್ರೀಡೆಗೆ ಬೇಕಾದ ಸೌಕರ್ಯ, ಸೂಕ್ತ ತರಬೇತಿ ಕೇಂದ್ರ ಹಾಗೂ ಮೈದಾನಗಳು ಇಲ್ಲದಿರುವುದು ಬೇಸರದ ವಿಷಯ.
ಜಿಲ್ಲೆಯ ಕ್ರೀಡಾಪಟುಗಳು ಬಹುತೇಕರು ಹೊರ ಜಿಲ್ಲೆ, ಹೊರ ರಾಜ್ಯದಲ್ಲಿ ತರಬೇತಿ ಪಡೆದು ಕ್ರೀಡೆಯಲ್ಲಿ ಸಾಧನೆ ಮಾಡಿದ್ದೇ, ಹೊರತು ಜಿಲ್ಲೆಯಲ್ಲಿ ತರಬೇತಿ ಪಡೆದು ಯಾರೂ ಕ್ರೀಡೆಯಲ್ಲಿ ಮೇಲ್ಮಟ್ಟಕ್ಕೆ ತಲುಪಿಲ್ಲ.
ಕ್ರೀಡೆಯಲ್ಲಿ ಆಸಕ್ತಿ ಇರುವ ಜಿಲ್ಲೆಯ ಬಡ ಕ್ರೀಡಾಪಟುಗಳು ಬರೀ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗುತ್ತಿದ್ದರೆ. ಆರ್ಥಿಕ ಪರಿಸ್ಥಿತಿಯಿಂದ ಸೂಕ್ತ ತರಬೇತಿ ಕೂಡ ಪಡೆಯಲು ಸಾಧ್ಯವಾಗದೇ, ತಮ್ಮ ಕನಸನ್ನು ಬರೀ ಗ್ರಾಮೀಣ ಭಾಗದಲ್ಲಿನ ಮೈದಾನಗಳಿಗೆ ಸೀಮಿತಗೊಳಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ ಪ್ರಾರಂಭಿಸಿದರೆ, ಜಿಲ್ಲೆಯ ಕ್ರೀಡಾಪಟುಗಳಿಗೆ ಅವಕಾಶ ದೊರೆಯಲಿದ್ದು, ಕ್ರೀಡೆಯ ಬಗ್ಗೆ ಸೂಕ್ತ ತರಬೇತಿ ಕೂಡ ಜಿಲ್ಲೆಯಲ್ಲೇ ಲಭಿಸುತ್ತದೆ. ಇದರಿಂದ ಕ್ರೀಡಾ ಕ್ಷೇತ್ರದಲ್ಲಿ ಕೊಡಗು ಜಿಲ್ಲೆ ಮತ್ತಷ್ಟು ಸಾಧನೆ ಮಾಡಬಹುದು.
ಆಟ ಆಡಲು ಮೈದಾನವೇ ಇಲ್ಲ
ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಕ್ರೀಡಾಪಟುಗಳಿಗೆ ಆಟ ಆಡಲು ಮೈದಾನವೇ ಇಲ್ಲದ ಪರಿಸ್ಥಿತಿ ಇದೆ. ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಕ್ರೀಡಾಪಟುಗಳು ಇರುವ ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ, ನಲ್ವತ್ತೇಕರೆ ಹಾಗೂ ವೀರಾಜಪೇಟೆ ತಾಲೂಕಿನ ಸಿದ್ದಾಪುರ ಭಾಗದಲ್ಲಿ ಸಾರ್ವಜನಿಕ ಆಟದ ಮೈದಾನವಿಲ್ಲದಿರುವುದು ಅತ್ಯಂತ ಖೇದಕರ ವಿಷಯವಾಗಿದೆ.
ಜಿಲ್ಲೆಯಲ್ಲಿ ದಿನನಿತ್ಯ ಫುಟ್ಬಾಲ್ ಆಟಗಾರರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಫುಟ್ಬಾಲ್‌ನಲ್ಲಿ ರಾಷ್ಟçವನ್ನು ಪ್ರತಿನಿಧಿಸುವ ಫುಟ್ಬಾಲ್ ಪಟುಗಳು ಕೊಡಗಿನಲ್ಲಿದ್ದಾರೆ. ಆದರೆ ಆಟ ಆಡಲು ಮೈದಾನವೇ ಇಲ್ಲದೇ, ಫುಟ್ಬಾಲ್ ಆಟವನ್ನೇ ಬಿಟ್ಟ ಅದೆಷ್ಟೋ ಫುಟ್ಬಾಲ್ ತಾರೆಗಳು ನಮ್ಮ ನಡುವೆ ಇದ್ದಾರೆ. ಜಿಲ್ಲೆಯಲ್ಲಿ ಕ್ರೀಡಾ ವಿ.ವಿ. ಸ್ಥಾಪನೆಯಾದರೆ ಕ್ರೀಡೆಯಲ್ಲಿರುವ ಎಲ್ಲಾ ಸಮಸ್ಯೆಗಳಿಗೆ ಉತ್ತರ ದೊರಕಲಿದೆ.
ಬೆಳಗಾವಿ ಕಲಾಪದಲ್ಲಿ ಚರ್ಚೆಯಾಗಿತ್ತು
ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿ.ವಿ. ಸ್ಥಾಪನೆಯ ವಿಷಯವನ್ನು ಪ್ರಸ್ತಾಪಿಸಿದ್ದರು.
ಕೊಡಗು ಜಿಲ್ಲೆಯಲ್ಲಿ ಕ್ರೀಡಾ ವಿ.ವಿ. ಸ್ಥಾಪನೆಯಗಬೇಕೆಂಬ ಬೇಡಿಕೆ ಸರ್ಕಾರದ ಗಮನಕ್ಕೆ ಬಂದಿದೆ. ಇದರ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುವುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಅವರು ಹೇಳಿದ್ದರು. ಸಚಿವರ ಹೇಳಿಕೆಯ ನಂತರ ಜಿಲ್ಲೆಯ ಜನರಲ್ಲಿ ಕ್ರೀಡಾ ವಿ.ವಿ. ಸ್ಥಾಪನೆಯ ಕುರಿತು ಚರ್ಚೆಗಳು ಪ್ರಾರಂಭವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ಕ್ರೀಡಾ ವಿಶ್ವವಿದ್ಯಾಲಯ ಘೋಷಣೆಯ ಸಾಗುವ ಸಾಧ್ಯತೆ ಇದೆ. ಬಜೆಟ್‌ನಲ್ಲಿ ಕ್ರೀಡಾ ವಿ.ವಿ. ಘೋಷಣೆಯಾಗುವ ನಿರೀಕ್ಷೆಯಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಹಾಗೂ ಕ್ರೀಡಾ ಪ್ರೇಮಿಗಳು ಇದ್ದಾರೆ.
ಹೆಸರಿಗಷ್ಟೇ ಕೊಡಗು ಕ್ರೀಡಾ ಜಿಲ್ಲೆ. ಹೊರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನಲ್ಲಿ ಎಲ್ಲಾ ಕ್ರೀಡೆಯಲ್ಲಿ ಅತೀ ಹೆಚ್ಚು ಕ್ರೀಡಾಪಟುಗಳು ಇದ್ದಾರೆ. ಹೊರ ಜಿಲ್ಲೆಯಲ್ಲಿ ಕ್ರೀಡೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ನೀಡಿದೆ. ಆದರೆ ಕ್ರೀಡಾ ಜಿಲ್ಲೆಯಾದ ಕೊಡಗನ್ನು ಕಡೆಗಣಿಸಲಾಗುತ್ತಿದೆ ಎಂಬ ಕೊರಗು ಈ ಬಾರಿ ಸರಿಯಾಗಬಹುದೇ ಎಂದು ಕಾದು ನೋಡಬೇಕಿದೆ.
- ಕೆ.ಎಂ. ಇಸ್ಮಾಯಿಲ್ ಕಂಡಕರೆ