ಸಿದ್ದಾಪುರ, ಫೆ. ೨೫: ಕಳೆದ ನಾಲ್ಕು ದಿನಗಳಿಂದ ತಿತಿಮತಿ ವಲಯ ಅರಣ್ಯ ವ್ಯಾಪ್ತಿಗೊಳಪಡುವ ಭದ್ರಗೊಳ ಸಮೀಪ ಗಬ್ಬದ ಹಸುವೊಂದನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಈ ಹಿನ್ನೆಲೆಯಲ್ಲಿ ಹುಲಿಯನ್ನು ಸೆರೆಹಿಡಿಯಲು ಕಾಫಿ ತೋಟದೊಳಗೆ ಹುಲಿಯ ಚಲನವಲನ ಕಂಡುಹಿಡಿಯಲು ೫ ಕ್ಯಾಮರಗಳನ್ನು ಅಳವಡಿಸಲಾಗಿತ್ತು. ಆದರೆ ಹುಲಿಯ ಚಲನವಲನ ಪತ್ತೆಯಾಗಿಲ್ಲ. ಅಲ್ಲದೆ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಕಾಫಿ ತೋಟದೊಳಗೆ ಬೋನ್‌ವೊಂದನ್ನು ಇರಿಸಲಾಗಿದ್ದು, ಇದರಲ್ಲಿ ಇತ್ತೀಚೆಗೆ ಸಾವನ್ನಪ್ಪಿದ ಹಸುವಿನ ಕಳೇಬರವನ್ನು ಇಡಲಾಗಿತ್ತು. ಆದರೆ ನಾಲ್ಕು ದಿನಗಳು ಕಳೆದರೂ ಕೂಡ ಹುಲಿರಾಯನ ಪತ್ತೆಯಾಗಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.