ಮಡಿಕೇರಿ ಫೆ. ೨೫: ಐಕೊನಿಕ್ ಬ್ರದರ್ಸ್ ಕಾಂತೂರು ಇವರ ವತಿಯಿಂದ ಮೂರ್ನಾಡು ಸಮೀಪದ ಕಾಂತೂರು ಗ್ರಾಮದ ಉಳುವಾರನ ಆಟದ ಮೈದಾನದಲ್ಲಿ ಮಾರ್ಚ್ ೫ ಮತ್ತು ೬ ರಂದು ಗೌಡ ಕುಟುಂಬಗಳಿಗೆ ವಾಲಿಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿದೆ. ಭಾಗವಹಿಸುವ ಕುಟುಂಬ ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ತಾ. ೨೮ ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಿಲನ್ ಉಳುವಾರನ - ೯೦೦೮೧೫೩೩೮೫, ಸನತ್ - ೯೪೮೦೭೨೧೭೯೯, ಕಲ್ಲುಮುಟ್ಲು ವಿನೋದ್ - ೯೬೬೩೭೨೨೩೨೨ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.