ಮಡಿಕೇರಿ, ಫೆ. ೨೫: ನ್ಯಾಟೋಗೆ ಉಕ್ರೇನ್ ಸೇರ್ಪಡೆ ವಿರೋಧಿಸಿ ಉಕ್ರೇನ್ ಹಾಗೂ ರಷ್ಯಾ ನಡುವಿನ ಕಾಳಗದಿಂದ ಉದ್ವಿಗ್ನ ಪರಿಸ್ಥಿತಿಗೆ ಒಳಗಾಗಿರುವ ಉಕ್ರೇನ್‌ನಲ್ಲಿ ಕೊಡಗು ಮೂಲದ ಮೂವರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕೂಡ್ಲೂರು ಗ್ರಾಮದ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ. ಮಂಜುನಾಥ್‌ಕುಮಾರ್ ಅವರ ಪುತ್ರ ಚಂದನ್‌ಗೌಡ ಉಕ್ರೇನ್‌ನಲ್ಲಿ ಕಾರ್‌ಕಿವ್ ನ್ಯಾಷನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಮೂರನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ಮಂಜುನಾಥ್ ಕುಮಾರ್ ರಷ್ಯಾದಿಂದ ಉಕ್ರೇನ್ ಮೇಲೆ ಮೊದಲ ಧಾಳಿ ನಡೆದಾಗ ನಾಲ್ಕೆöÊದು ಗಂಟೆಗಳ ಕಾಲ ಮೆಟ್ರೋ ಅಂಡರ್‌ಗ್ರೌAಡ್‌ನಲ್ಲಿ ಚಂದನ್‌ಗೌಡ ಹಾಗೂ ಅವರ ಸ್ನೇಹಿತರು ಉಳಿದುಕೊಂಡಿದ್ದರು.

ನಂತರ ಊಟಕ್ಕೆಂದು ಅಪಾರ್ಟ್ ಮೆಂಟ್‌ಗೆ ತೆರಳಿ ಅಲ್ಲಿನ ಬೇಸ್ಮೆಂಟ್‌ನಲ್ಲಿ ನೆಲೆಸಿದ್ದು, ಇನ್ನೆರಡು ದಿನ ಕಳೆದರೆ ಅನ್ನ ಆಹಾರಕ್ಕೂ ಅವರುಗಳಿಗೆ ತೊಂದರೆಯಾಗಲಿದೆ. ಉಕ್ರೇನ್‌ನಲ್ಲಿ ಕರ್ಫ್ಯೂ ಜಾರಿಯಾಗಿದ್ದು, ಹೊರಬರ ಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಉಕ್ರೇನ್ ಗಡಿ ದಾಟಿ ಬಂದರೆ ಬೇರೆಡೆಗೆ ಸಾಗಲು ಸಹಕರಿಸುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ ಕರ್ಫ್ಯೂವಿನಿಂದ ಹೊರಬರಲಾಗದ ಪರಿಸ್ಥಿತಿ ಉಂಟಾಗಿ ರುವಾಗ ಗಡಿ ದಾಟುವುದಾದರೂ ಹೇಗೆ ಎಂದು ಮಂಜುನಾಥ್ ಕುಮಾರ್ ಪ್ರಶ್ನಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.

ಕುಶಾಲನಗರ ಬಸವೇಶ್ವರ ಬಡಾವಣೆಯ

(ಮೊದಲ ಪುಟದಿಂದ) ಕಲಾವತಿ ಎಂಬವರ ಪುತ್ರ ಲಿಖಿತ್ ಎಂಬಾತ ಕೂಡ ಉಕ್ರೇನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದು, ಚಂದನ್‌ಗೌಡ ಜೊತೆಗೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಆರ್ಜಿ ಗ್ರಾಮದ ಶಹನಾಜ್ ಹಾಗೂ ಮಹಮದ್ ಯೂಸುಫ್ ಎಂಬವರ ಪುತ್ರ ಶಾರುಖ್ ಎಂಬಾತನೂ ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಮೆಟ್ರೋ ಅಂಡರ್‌ಗ್ರೌAಡರ್‌ನಲ್ಲಿ ಆಶ್ರಯ ಪಡೆದಿದ್ದಾನೆ. ಈತ ವಿಎನ್. ಕರಾಸಿನ್ ಕಾರ್ಕಿವ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.