ಮಡಿಕೇರಿ, ಫೆ. ೨೩: ಅಶೋಕಪುರದ ಡಾ. ಬಿ.ಆರ್. ಅಂಬೇಡ್ಕರ್ ಯುವ ವೇದಿಕೆ ವತಿಯಿಂದ ಮಾರ್ಚ್ ೧೨ ಮತ್ತು ೧೩ರಂದು ೩ನೇ ವರ್ಷದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ವೇದಿಕೆಯ ಅಧ್ಯಕ್ಷ ಸುಧೀರ್ ಕುಮಾರ್ ಹಾಗೂ ಕಾರ್ಯದರ್ಶಿ ಚಂದ್ರಮೌಳಿ ಈ ಬಗ್ಗೆ ಮಾಹಿತಿ ನೀಡಿದರು. ಗಾಂಧಿ ಮೈದಾನದಲ್ಲಿ ಪಂದ್ಯಾಟ ನಡೆಯಲಿದ್ದು, ಮೊದಲ ಬಹುಮಾನವಾಗಿ ರೂ. ೫೦ ಸಾವಿರ ನಗದು ಟ್ರೋಫಿ, ಎರಡನೇ ಬಹುಮಾನವಾಗಿ ರೂ. ೨೫ ಸಾವಿರ ನಗದು ಟ್ರೋಫಿ, ತೃತೀಯ ಬಹುಮಾನವಾಗಿ ರೂ. ೧೫ ಸಾವಿರ ನಗದು ಟ್ರೋಫಿ, ನಾಲ್ಕನೇ ಬಹುಮಾನವಾಗಿ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಪಂದ್ಯಾಟಕ್ಕೆ ತಂಡಗಳು ಹೆಸರು ನೋಂದಾಯಿಸಲು ಮಾ. ೫ ಕೊನೆಯ ದಿನಾಂಕವಾಗಿದೆ.
ಪAದ್ಯಾಟ ನಡೆಯುವ ಎರಡು ದಿನ ರಾತ್ರಿ ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾಭಿಮಾನಿಗಳಿಗೆ ಉಚಿತ ಊಟದ ವ್ಯವಸ್ಥೆಯಿದೆ. ಹೆಚ್ಚಿನ ಮಾಹಿತಿಗೆ ೯೪೮೦೧೭೫೬೦೫, ೯೪೪೯೮೨೮೩೮೦ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅವರುಗಳು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ವೇದಿಕೆಯ ಕಾರ್ಯಾಧ್ಯಕ್ಷ ಎಂ.ಸಿ. ರವಿ, ಉಪಾಧ್ಯಕ್ಷ ಧರ್ಮೇಂದ್ರ, ಖಜಾಂಚಿ ಪ್ರಜ್ವಲ್, ತಾಂತ್ರಿಕ ಸಮಿತಿ ಅಧ್ಯಕ್ಷ ಸುನಿಲ್ ಉಪಸ್ಥಿತರಿದ್ದರು.