ಮಡಿಕೇರಿ, ಫೆ. ೨೩: ಅಗಲಿದ ಹಿರಿಯರ ಆತ್ಮಕ್ಕೆ ಶಾಂತಿ ಕೋರಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಕೋಟೆ, ನಾಲ್ಕುನಾಡು ಅರಮನೆ ಮತ್ತು ದೇವಟ್ ಪರಂಬುವಿನಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು.

ಅಂರ‍್ರಾಷ್ಟಿçÃಯ ಮಾತೃಭಾಷಾ ದಿನದ ಅಂಗವಾಗಿ ಮೃತ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ನಮಿಸಿದ ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಹಾಗೂ ಪ್ರಮುಖರು ಶಾಶ್ವತ ಸ್ಮಾರಕ ನಿರ್ಮಾಣಕ್ಕಾಗಿ ಒತ್ತಾಯಿಸಿದರು.

ಪಟ್ಟಮಾಡ ಲಲಿತಾ ಗಣಪತಿ, ಪುಲ್ಲೇರ ಸ್ವಾತಿ ಕಾಳಪ್ಪ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಬಿ.ಎಂ. ಪಾರ್ವತಿ, ಕೂಪದಿರ ಪುಷ್ಪ ಮುತ್ತಣ್ಣ, ಅಜ್ಜಿನಿಕಂಡ ಎಂ. ಬಾಳಪ್ಪಾ ಮುತ್ತಣ್ಣ, ಅಜ್ಜಿನಿಕಂಡ ಇನಿತ, ಅರೆಯಡ ಗಿರೀಶ್, ಚಂಬAಡ ಜನತ್, ಬೇಪಡಿಯಂಡ ದಿನು, ಕಾಟುಮಣಿಯಂಡ ಉಮೇಶ್, ಅಪೆಯಂಗಡ ಮಾಲೆ ಪೂಣಚ್ಚ, ಕಿರಿಯಮಾಡ ಶೆರೀನ್, ಬೊಟ್ಟಂಗಡ ಗಿರೀಶ್, ಬಡುವಂಡ ವಿಜಯ್, ಕೂಪದಿರ ಸಾಬು ತಮ್ಮಯ್ಯ, ಮೇದೂರ ಕಂಟಿ ದೇವಾ ನಾಣಿಯಪ್ಪ, ನಾಪಂಡ ಅರುಣ್, ಮಂದಪAಡ ಮನೋಜ್, ಮಂದಪAಡ ಸೂರಜ್ ಮತ್ತಿತರರು ಹಾಜರಿದ್ದರು.