ನಾಪೋಕ್ಲು, ಫೆ. ೨೪: ಸ್ಕೌಟ್ಸ್ ಮತ್ತು ಗೈಡ್ಸ್ಗೆ ರಾಬರ್ಟ್ ಬ್ಯಾಡನ್ ಪೊವೆಲ್ ನೀಡಿದ ಕೊಡುಗೆ ಅಪಾರ. ಎಂದು ನಾಪೋಕ್ಲು-ಸಂಪಾಜೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಧನಂಜಯ ಹೇಳಿದರು.
ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕೆಪಿಎಸ್ ನಾಪೋಕ್ಲು ಜಂಟಿ ಸಹಯೋಗ ದೊಂದಿಗೆ ಏರ್ಪಡಿಸಲಾಗಿದ್ದ ರಾಬರ್ಟ್ ಬ್ಯಾಡನ್ ಪೊವೆಲ್ ಅವರ ಜನ್ಮದಿನವನ್ನು ಚಿಂತನ ದಿನವನ್ನಾಗಿ ಆಚರಿಸಲಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾರ್ಯದರ್ಶಿ ಉಷಾರಾಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಉಪಾಧ್ಯಕ್ಷ ಹ್ಯಾರಿ ಮಂದಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕಿಯರಾದ ಶ್ವೇತ, ಲೀಲಾವತಿ, ಸರಿತ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶಾಲೆಯ ಉಪಾಧ್ಯಕ್ಷ ಹ್ಯಾರಿ ಮಂದಣ್ಣ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಯೋಜಕಿಯರಾದ ಶ್ವೇತ, ಲೀಲಾವತಿ, ಸರಿತ ಉಪಸ್ಥಿತರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಮ್ಲಾ ಸ್ವಾಗತಿಸಿದರು. ಹರ್ಷಿತ ಕುಶಾಲಪ್ಪ ವಂದಿಸಿದರು. ಶಮ್ಲಾ ಫಿರ್ದೌಸ್ ಹಾಗೂ ಅಫ್ರಿನಾ ಕಾರ್ಯಕ್ರಮ ನಿರೂಪಿಸಿದರು.