ಗೋಣಿಕೊಪ್ಪ ವರದಿ, ಫೆ. ೨೪: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿAದ ಜಿಲ್ಲಾ ಪುರಸ್ಕಾರ ಪಡೆದ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾದ ಜೆ.ಕೆ. ಶಿವಮ್ಮ, ಜೆ.ಎಂ. ಸಹನಾ, ಜೆ.ಎ. ಪವಿತ್ರ, ರಿಷಾನ ತಸ್ನಿ, ಎ.ಆರ್. ಫಿಧಾ ಫಾತೀಮ ಅವರುಗಳನ್ನು ಶಾಲೆ ವತಿಯಿಂದ ಸನ್ಮಾನಿಸ ಲಾಯಿತು. ಮುಖ್ಯ ಶಿಕ್ಷಕ ವಿ.ಆರ್ ಶಶಿಧರ್, ಗೈಡ್ ಕ್ಯಾಪ್ಟನ್ ಪಿ.ಹೆಚ್. ಅಲಿಮಾ, ಶಿಕ್ಷಕಿಯರಾದ ಎಲ್ಲಾ ಶಿಕ್ಷಕಿಯರಾದ ಎ.ಕೆ. ಶಕುಂತಲಾ, ಎಂ.ಎನ್. ಸಜನಿ, ಸವಿತ ಕುಮಾರಿ, ಸೌಮ್ಯ, ರೇಖಾ ಇದ್ದರು.
ಪೊನ್ನಂಪೇಟೆಯಲ್ಲಿ ನಡೆದ ಚಿಂತನ ದಿನಾಚರಣೆಯಲ್ಲಿ ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಪ್ರದಾನ ಮಾಡಿದರು.