ಮಡಿಕೇರಿ, ಫೆ. ೨೪: ಮಡಿಕೇರಿಯ ಶ್ರೀ ಮುತ್ತಪ್ಪ ಕೊಡವಕೇರಿಯ ನೂತನ ಸಮಿತಿ ಸಭೆ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕೇರಿಯ ನೂತನ ಅಧ್ಯಕ್ಷರಾಗಿ ಶಾಂತೆಯAಡ ಸನ್ನಿ ಪೂವಯ್ಯ, ಉಪಾಧ್ಯಕ್ಷರಾಗಿ ಕಂಡ್ರತAಡ ಮುತ್ತು ದೇವಯ್ಯ, ಖಜಾಂಚಿಯಾಗಿ ಶಾಂತೆಯAಡ ಕಿಸು ದೇವರಜು, ಖಜಾಂಚಿಯಾಗಿ ಕುಪ್ಪಂಡ ವಸಂತ್ ಚಿಣ್ಣಪ್ಪ ಹಾಗೂ ಇತರ ೧೨ ಮಂದಿ ನಿರ್ದೇಶಕರುಗಳಾಗಿ ಈ ಹಿಂದೆ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾಗಿದ್ದರು. ಸಭೆಯಲ್ಲಿ ಮಾಜಿ ಅಧ್ಯಕ್ಷ ಮುಂಡAಡ ಗಾಂಧಿ, ಪದಾಧಿಕಾರಿಗಳಾಗಿದ್ದ ಕನ್ನಂಡ ಸುಧಾ ಬೊಳ್ಳಪ್ಪ, ಅಲ್ಲಾರಂಡ ರವಿ ಅಯ್ಯಪ್ಪ, ಮತ್ತಿತರರು ಪಾಲ್ಗೊಂಡಿದ್ದರು. ಈ ಸಂದರ್ಭ ಮಾಜಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.