ಶನಿವಾರಸಂತೆ, ಫೆ. ೨೪: ಪಟ್ಟಣದಿಂದ ೧೨ ಕಿ.ಮೀ. ದೂರದ ಮಾಲಂಬಿ ಬೆಟ್ಟದ ಮಳೆ ಮಲ್ಲೇಶ್ವರ ದೇವಾಲಯ ಮಾ. ೧ ರ ಶಿವರಾತ್ರಿಗೆ ಸಜ್ಜಾಗಿದೆ. ಕೊಡಗಿನ ೭ ಸಾವಿರ ಸೀಮೆಬೆಟ್ಟ ಸಾಲುಗಳಲ್ಲಿ ೩ನೇ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೨ನೇ ಅತೀ ಎತ್ತರದ ಬೆಟ್ಟ ಎನಿಸಿರುವ ಮಾಲಂಬಿ ಬೆಟ್ಟ ಐತಿಹಾಸಿಕ ಮಹತ್ವ ಪಡೆದಿದೆ.

ಶಿವರಾತ್ರಿಗೆ ಮಾತ್ರವಲ್ಲ, ಪ್ರವಾಸೋದ್ಯಮ ದೃಷ್ಟಿಯಿಂದಲೂ ಮಹತ್ವ ಪಡೆದಿರುವ ಬೆಟ್ಟ ಚಾರಣಿಗರಿಗೆ ಅತ್ಯಂತ ಪ್ರಿಯವಾದ ತಾಣವಾಗಿದೆ. ೫,೪೯೪ ಅಡಿ ಎತ್ತರದ ಬೆಟ್ಟದ ತುದಿಯಲ್ಲಿ ಕಟ್ಟಿರುವ ಮಳೆ ಮಲ್ಲೇಶ್ವರ ದೇಗುಲ ಬೆಟ್ಟಕ್ಕೆ ಕಿರೀಟ ಇಟ್ಟಂತೆ ಕಾಫಿ ತೋಟಗಳ ಐಸಿರಿ ಮಧ್ಯೆ ಕಂಗೊಳಿಸುತ್ತಿದೆ.

ಕೊಡಗನ್ನು ಆಳಿದ ವೀರಶೈವ ದೊರೆಗಳ ಆಳ್ವಿಕೆ ಕಾರಣ ಜಿಲ್ಲೆಯಲ್ಲಿ ಶಿವನ ಆರಾಧನೆಯೇ ಅಧಿಕವಾಗಿದ್ದು, ೧೮೩೦ ರಿಂದ ಮಾಲಂಬಿ ಬೆಟ್ಟದ ಮೇಲೆ ಮಳೆ ಮಲ್ಲೇಶ್ವರನಿಗೆ ಪೂಜಾ ಕಾರ್ಯಗಳು ನಡೆಯುತ್ತಿವೆ. ಹಿಂದೊಮ್ಮೆ ಜಿಲ್ಲೆಯಲ್ಲಿ ಭೀಕರ ಕ್ಷಾಮ ಆವರಿಸಿಕೊಂಡಿದ್ದಾಗ ಹಾಸನ ಜಿಲ್ಲೆಯ ಅರಕಲಗೂಡಿನಿಂದ ಶಿವನು ಮಲೇಶ್ವರಕ್ಕೆ ಬಂದು ನೆಲೆಸಿದನೆಂಬುದು ಪುರಾಣ ಕಥೆ. ಆಗ ಮಳೆಯಾಗಿದ್ದರಿಂದ ಈ ದೇವರಿಗೆ ‘ಮಳೆ ಮಲ್ಲೇಶ್ವರ’ ಎಂಬ ಹೆಸರು ಬಂದಿತೆAಬುದು ಪ್ರತೀತಿ. ಹೀಗಾಗಿ ಪ್ರತಿವರ್ಷ ಶಿವರಾತ್ರಿಯಂದು ಇಲ್ಲಿ ಪೂಜಾ ಕೈಂಕರ್ಯ, ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತದೆ. ಜಿಲ್ಲೆ ಹಾಗೂ ನೆರೆ ಜಿಲ್ಲೆಗಳಿಂದಲೂ ೧೫ ಸಾವಿರಕ್ಕೂ ಅಧಿಕ ಭಕ್ತರು ಬಂದು ಮುಂಜಾನೆಯಿAದಲೇ ಬೆಟ್ಟ ವೇರುವುದು ವಿಶೇಷ. ಬೆಟ್ಟ ಇಳಿದು ಬರುತ್ತಿರುವಂತೆಯೇ ತುಂತುರು ಮಳೆ ಸುರಿಯುತ್ತದೆ ಎಂಬ ನಂಬಿಕೆಯೂ ಇದೆ. ೧೯೯೯ ರಲ್ಲಿ ದಾನಿಗಳು ಹಾಗೂ ಕೆಲ ಕಾಫಿ ಬೆಳೆಗಾರರು ಸೇರಿ ರೂ. ೧೦ ಲಕ್ಷ ವೆಚ್ಚದಲ್ಲಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದ್ದಾರೆ. ೨೦೦೬ ರಲ್ಲಿ ಪ್ರವಾಸೋದ್ಯಮ ಇಲಾಖೆಗೆ ಮಾಲಂಬಿ ಮಳೆ ಮಲ್ಲೇಶ್ವರ ಬೆಟ್ಟವನ್ನು ಸೇರಿಸಲಾಗಿದೆ. ೨೦೧೨-೧೩ರ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ರೂ. ೬೮ ಲಕ್ಷ ವೆಚ್ಚದಲ್ಲಿ ಬೆಟ್ಟವನ್ನು ಅಭಿವೃದ್ಧಿ ಪಡಿಸಿದೆ. ಮಾ. ೧ ರಂದು ಮಳೆ ಮಲ್ಲೇಶ್ವರ ದೇವಾಲಯ ಸಮಿತಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಿದೆ. ಬೆಳಿಗ್ಗೆ ೭ ಗಂಟೆಯಿAದ ಮಧ್ಯಾಹ್ನ ೨.೩೦ ರವರೆಗೆ ದೇವತಾ ಪೂಜೆ, ೧೨.೩೦ಕ್ಕೆ ಮಹಾಮಂಗಳಾರತಿ ಹಾಗೂ ಅನ್ನಸಂರ್ಪಣೆ ನಡೆಯಲಿದೆ.