ಮಡಿಕೇರಿ, ಫೆ. ೨೪: ಭಾಗಮಂಡಲ - ತಲಕಾವೇರಿಗೆ ಸಂಬAಧಿಸಿದAತೆ ರಚಿಸಲಾಗಿದ್ದ ಶ್ರೀ ಭಗಂಡೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ತಡೆಯಾಜ್ಞೆ ನೀಡಲಾಗಿದೆ. ಈ ಸಮಿತಿ ರಚನೆ ಕುರಿತಾಗಿ ನೇಮಕಾತಿಯನ್ನು ಪ್ರಶ್ನೆ ಮಾಡಿ ಹುದಿಕೇರಿಯ ಅಜ್ಜಿಕುಟ್ಟೀರ ಎಂ. ಸುಬ್ಬಯ್ಯ, ಕಂಡAಗಾಲದ ಅಪ್ಪಂಡೇರAಡ ಯಶವಂತ್ ಕಾಳಪ್ಪ ಹಾಗೂ ನೆಲಜಿಯ ಅಪ್ಪುಮಣಿಯಂಡ ದೇಚಮ್ಮ ಸೋಮಣ್ಣ ಅವರುಗಳು ಉಚ್ಚ ನ್ಯಾಯಾಲಯದ ಮುಂದೆ ಪ್ರಶ್ನೆ ಮಾಡಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ವ್ಯವಸ್ಥಾಪನಾ ಸಮಿತಿಯು ಸ್ಥಳೀಯ ಶಾಸಕರ ಪತ್ರದ ಆಧಾರಿತ ರಚನೆಯಾಗಿದೆ. ಶಾಸಕರಿಗೆ ಕಾನೂನಿನಲ್ಲಿ ಈ ರೀತಿ ಪತ್ರ ಬರೆಯುವ ಅಧಿಕಾರ ಇಲ್ಲ. ಕಾನೂನಿನ ಅಡಿಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿಗೆ ನೇಮಕಾತಿ ಮಾಡುವ ಅಧಿಕಾರವಿರುತ್ತದೆ. ಅದರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಸಲ್ಲದು. ಸೆಕ್ಷನ್ ೨೫ರಲ್ಲಿ ವಿಧಿಸಲಾದ ಷರತ್ತುಗಳ ಪ್ರಕಾರ ಇಬ್ಬರು ಮಹಿಳೆಯರು ಸಮಿತಿಯಲ್ಲಿ ಇರಲೇಬೇಕು. ಅದೇ ರೀತಿ ಒಬ್ಬ ಅರ್ಚಕರು ಕೂಡ ಸಮಿತಿಯಲ್ಲಿ ಸ್ಥಾನವನ್ನು ಪಡೆಯಬೇಕು. ಈ ಎರಡು ನಿಯಮಗಳು ಕೂಡ ಉಲ್ಲಂಘನೆಯಾಗಿದೆ ಎಂದು ಈ ವಿಷಯವನ್ನು ಉಚ್ಚ ನ್ಯಾಯಾಲಯದ ಮುಂದೆ ಮಂಡಿಸಲಾಗಿದೆ.

(ಮೊದಲ ಪುಟದಿಂದ)

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಎ.ಎಸ್. ಪೊನ್ನಣ್ಣ ಅವರು ವಾದವನ್ನು ಮಂಡಿಸಿದರು. ವಾದವನ್ನು ಆಲಿಸಿದ ಉಚ್ಚ ನ್ಯಾಯಾಲಯ, ಸರ್ಕಾರ, ಧಾರ್ಮಿಕ ಪರಿಷತ್ ಸೇರಿ ಎಲ್ಲಾ ಪ್ರತಿವಾದಿಗಳಿಗೆ ನೋಟೀಸನ್ನು ಜಾರಿ ಮಾಡಿ ಮಧ್ಯಂತರ ಆದೇಶವನ್ನು ಜಾರಿಮಾಡಿದೆ.

ಮಧ್ಯಂತರ ಆದೇಶದ ಪ್ರಕಾರ ವ್ಯವಸ್ಥಾಪನಾ ಸಮಿತಿಯು ಯಥಾಸ್ಥಿತಿಯನ್ನು ಕಾಪಾಡಲು ಸೂಚಿಸಲಾಗಿದೆ. ನೋಟೀಸ್ ಜಾರಿಯಾದ ನಂತರ ಉಚ್ಚನ್ಯಾಯಾಲಯ ಮುಂದಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ರಾಜ್ಯ ಸರಕಾರ, ಆಯುಕ್ತರು, ಹಿಂದೂ ಧಾರ್ಮಿಕ ಪರಿಷತ್, ರಾಜ್ಯ ಧಾರ್ಮಿಕ ಪರಿಷತ್ ಸೇರಿದಂತೆ ಸಮಿತಿಗೆ ಇತ್ತೀಚೆಗೆ ಆಯ್ಕೆ ಮಾಡಲಾಗಿರುವ ೯ ಮಂದಿಯನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.