ಮಡಿಕೇರಿ, ಫೆ. ೨೩: ಟಿ. ಶೆಟ್ಟಿಗೇರಿ ಸಿದ್ದಾಶ್ರಮದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಮಾರ್ಚ್ ೧ ರಂದು ಬೆಳಿಗ್ಗೆ ೬ ಗಂಟೆಯಿAದ ೭ ಗಂಟೆಯವರೆಗೆ ನಿತ್ಯಪೂಜೆ, ೭ ಗಂಟೆಯಿAದ ೮ ಗಂಟೆಯವರೆಗೆ ಪಂಚಾಕ್ಷರಿ ಭಜನೆ, ೮.೩೦ ರಿಂದ ೯ ಗಂಟೆಯವರೆಗೆ ಗಣಪತಿ ಹೋಮ, ೯ ಗಂಟೆಯಿAದ ೧೦ ಗಂಟೆಯವರೆಗೆ ಗೋಣಿಕೊಪ್ಪಲಿನ ಭಗವಾನ್ ಶ್ರೀ ಸತ್ಯ ಸಾಯಿಬಾಬ ಭಕ್ತವೃಂದದವರಿAದ ಭಜನೆ ಮತ್ತು ಸಂಕೀರ್ತನೆ, ೧೦ ರಿಂದ ೧೧ ಗಂಟೆಯವರೆಗೆ ಶಿವಲಿಂಗಕ್ಕೆ ಬಿಲ್ವರ್ಚನೆ, ಪಂಚಾಮೃತ, ರುದ್ರಾಭಿಷೇಕ, ಮಹಾಮಂಗಳಾರತಿ ಹಾಗೂ ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಪ್ಪುಡಿರ ಪೃಥ್ವಿ ಪೂಣಚ್ಚ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾತಂಡ ಉತ್ತಯ್ಯ (ಕಂಬು), ಡಾ. ಕೆ.ಕೆ. ಶಿವಪ್ಪ ಭಾಗವಹಿಸಲಿದ್ದಾರೆ. ಕಾಳಿಮಾಡ ಕೆ. ಬೆಳ್ಯಪ್ಪ ಸ್ವಾಗತಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.