ಶ್ರೀಮಂಗಲ, ಫೆ. ೨೪: ದಕ್ಷಿಣ ಕೊಡಗಿನ ಬಾಡಗರಕೇರಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಗುರುವಾರ ಸಾಂಪ್ರದಾಯಿಕವಾದ ಕೊಡಿಮರ ಇಳಿಸುವ ಮೂಲಕ ತೆರೆಬಿದ್ದಿದೆ.
ತಾ.೧೩ರಂದು ಕೊಡಿಮರ ನಿಲ್ಲಿಸುವ ಮೂಲಕ ದೇವಸ್ಥಾನದ ವಾರ್ಷಿಕ ಉತ್ಸವ ಪ್ರಾರಂಭವಾಗಿತ್ತು. ಬುಧವಾರ ಬೆಳಿಗ್ಗೆಯಿಂದ ಮಧ್ಯರಾತ್ರಿ ವರೆಗೂ ವಾರ್ಷಿಕ ಉತ್ಸವದ ವಿಶೇಷ ಪೂಜೆ ನಡೆಯಿತು. ಸಂಜೆ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು, ಉತ್ಸವ ಮೂರ್ತಿ ಅವಭೃತ ಸ್ನಾನ, ಉತ್ಸವ ಮೂರ್ತಿ ಪ್ರದಕ್ಷಿಣೆ ನೆರವೇರಿತು.
ಉತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯ ದರ್ಶನ ಪಡೆದರು. ಭಕ್ತಾದಿಗಳಿಗೆ ಮಧ್ಯಾಹ್ನ ಸಾಮೂಹಿಕ ಅನ್ನದಾನ, ಸಂಜೆ ಲಘು ಫಲಹಾರ ವ್ಯವಸ್ಥೆ ಕಲ್ಪಿಸಲಾಗಿತ್ತು. ದೇವಸ್ಥಾನ ದೇವತಕ್ಕ ಅಣ್ಣೀರ ಕುಟುಂಬದ ದಾದ ಗಣಪತಿ, ನಾಡ್ ತಕ್ಕ ಕುಟುಂಬದ ಹಿರಿಯರಾದ ಅಯ್ಯಪ್ಪ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಲ್ಯಮೀದೇರಿರ ಸುರೇಶ್, ಗೌ.ಕಾರ್ಯದರ್ಶಿ ಅಣ್ಣೀರ ಪ್ರತಿಕ್‌ಪೊನ್ನಣ್ಣ, ಉಪಾಧ್ಯಕ್ಷ ಚೋನಿರ ಮಧುಕಾರ್ಯಪ್ಪ, ಖಜಾಂಚಿ ಕಾಯಪಂಡ ಚಿಣ್ಣಪ್ಪ, ನಿರ್ದೇಶಕರುಗಳಾದ ಮೀದೇರಿರ ವಿಜಯ, ಅಮ್ಮತ್ತಿರ ಗಣೇಶ್, ಕುಪ್ಪುಡಿರ ಅಯ್ಯಣ್ಣ, ಅಣ್ಣೀರ ಸರು, ಬಲ್ಯಮೀದೇರಿರ ಅರುಣ, ಚೋನಿರ ಜೀವನ್, ಮಲ್ಲೇಂಗಡ ಸೂರಜ್, ಅಯ್ಯಮಾಡ ಕಿಶು, ಬಲ್ಯಮೀದೇರಿರ ನವೀನ್ ಮತ್ತು ದೇವಸ್ಥಾನ ಪ್ರಧಾನ ಅರ್ಚಕ ಗಿರೀಶ್ ಅವರ ನೇತೃತ್ವದಲ್ಲಿ ಉತ್ಸವ ನಿರ್ವಹಿಸಲಾಯಿತು.