ಸುಂಟಿಕೊಪ್ಪ, ಫೆ. ೨೪: ವಿದ್ಯಾರ್ಥಿಗಳು ಪ್ರೀತಿ, ಕರುಣೆ, ನ್ಯಾಯ, ತ್ಯಾಗ ಹಾಗೂ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಆದರೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಸಂತ ಅಂತೋಣಿ ಶಾಲಾ ಮುಖ್ಯೋಪಾ ಧ್ಯಾಯಿನಿ ವೀರಾ ಡಿಸೋಜ ಹೇಳಿದರು.

ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಸೇವಾದಳದ ಸಂಸ್ಥಾಪಕ ರಾದ ಬೆಡನ್‌ಪೌಲ್, ಲೇಡಿ ಬೆಡನ್‌ಪೌಲ್ ಅವರ ದಿನವನ್ನು ಚಿಂತನ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಗಳಿಂದ ದೂರವಿರಿ ಮೊಬೈಲ್‌ಗಳ ಬಳಕೆಯಿಂದ ಶಿಕ್ಷಣದ ಸಮಯವನ್ನು ಕುಂಠಿತಗೊಳಿಸುತ್ತಿದೆ. ಮಕ್ಕಳು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವುದರಿಂದ ಮುಂದಿನ ನಿಮ್ಮ ಭವಿಷ್ಯ ಉಜ್ವಲಗೊಳ್ಳಲಿದೆ. ಮಕ್ಕಳು ಈಗಿನಿಂದಲೇ ಸಾಮಾಜಿಕ ಸೇವಾ ಸುಂಟಿಕೊಪ್ಪ, ಫೆ. ೨೪: ವಿದ್ಯಾರ್ಥಿಗಳು ಪ್ರೀತಿ, ಕರುಣೆ, ನ್ಯಾಯ, ತ್ಯಾಗ ಹಾಗೂ ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಳ್ಳಬೇಕು. ಆದರೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕೆಂದು ಸಂತ ಅಂತೋಣಿ ಶಾಲಾ ಮುಖ್ಯೋಪಾ ಧ್ಯಾಯಿನಿ ವೀರಾ ಡಿಸೋಜ ಹೇಳಿದರು.

ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್, ಸೇವಾದಳದ ಸಂಸ್ಥಾಪಕ ರಾದ ಬೆಡನ್‌ಪೌಲ್, ಲೇಡಿ ಬೆಡನ್‌ಪೌಲ್ ಅವರ ದಿನವನ್ನು ಚಿಂತನ ದಿನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಗಳಿಂದ ದೂರವಿರಿ ಮೊಬೈಲ್‌ಗಳ ಬಳಕೆಯಿಂದ ಶಿಕ್ಷಣದ ಸಮಯವನ್ನು ಕುಂಠಿತಗೊಳಿಸುತ್ತಿದೆ. ಮಕ್ಕಳು ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುವುದರಿಂದ ಮುಂದಿನ ನಿಮ್ಮ ಭವಿಷ್ಯ ಉಜ್ವಲಗೊಳ್ಳಲಿದೆ. ಮಕ್ಕಳು ಈಗಿನಿಂದಲೇ ಸಾಮಾಜಿಕ ಸೇವಾ ನಾಯಕರು ಮೊದಲಿಗೆ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಬಿಜು ಬಹಮಾನ ವಿತರಿಸಿ ಮಾತನಾಡಿದರು. ಈ ಸಮಾರಂಭ ದಲ್ಲಿ ಸಂತ ಕ್ಲಾರ ಕನ್ಯಾಸ್ತಿçà ಕೇಂದ್ರದ ಮದರ್ ಸೂಪಿರಿಯರ್ ಸಿಸ್ಟರ್ ವೈಲೆಟ್ ರಾಡ್ರಿಗಸ್, ಬುಲ್-ಬುಲ್, ಸೇವಾದಳದ ಮುಖ್ಯಸ್ಥೆ ಶಾಲಾ ಶಿಕ್ಷಕಿ ಯಿವಾ ಬೆನ್‌ಸಿಸ್ ಡಿಕೋಸ್ಟ, ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾದಳದ ಮುಖ್ಯಸ್ಥೆ ಶಾಲಾ ಶಿಕ್ಷಕಿ ಪ್ರೀತಿ ಪಿಂಠೋ ಹಾಗೂ ಕಫ್ಸ್ ಶಿಕ್ಷಕ ಮಹೇಶ್ ಮಾತನಾಡಿದರು.

ದಿನದ ಅಂಗವಾಗಿ ಸ್ಕೌಟ್ಸ್, ಗೈಡ್ಸ್, ಕಫ್, ಬುಲ್-ಬುಲ್ ಸೇವಾ ದಳದ ವಿದ್ಯಾರ್ಥಿಗಳು ಕವಾಯತ್ ಇನ್ನಿತರ ಕ್ರೀಡಾಕೂಟಗಳನ್ನು ನಡೆಸಲಾಯಿತು. ನಂತರ ಸ್ಕೌಟ್ಸ್, ಗೈಡ್ಸ್, ಕಫ್, ಬುಲ್-ಬುಲ್ ಸೇವಾದಳದ ಪಟ್ಟಣದ ಮುಖ್ಯ ಬೀದಿಗಳಲ್ಲಿ ತೆರಳಿ ಮೆರವಣಿಗೆ ತೆರಳಿ ಜೀವಜಲವನ್ನು ಅನಾವಶ್ಯಕ ವಾಗಿ ಪೋಲು ಮಾಡದೆ, ನೀರನ್ನು ಮಿತವಾಗಿ ಬಳಕೆಮಾಡಿ ಉಳಿಸುವ ಬಗ್ಗೆ ಘೋಷಣೆ ಹಾಗೂ ಬಿತ್ತಿ ಪತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.