ಮಡಿಕೇರಿ, ಫೆ. ೨೪: ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮ ಇಂದು ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ನಡೆಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಅವರು ೩ ದಿನಗಳ ಕಾಲ ಕಾರ್ಯಕರ್ತರಿಗೆ ನಡೆಯುವ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿ, ಕಾರ್ಯಕ್ರಮ ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಕೊಡಗು ಬಿ.ಜೆ.ಪಿಯ ಭದ್ರಕೋಟೆಯಾಗಿದೆ. ಇದು ಹಾಗೆ ಮುಂದುವರಿಯಲಿ ಎಂದು ಆಶಿಸಿದರು. ಈ ಕಾರ್ಯಕ್ರಮ ಕಾರ್ಯಕರ್ತರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಗಲಿದ್ದು, ಆಸಕ್ತಿ ವಹಿಸಿ ಕಾರ್ಯಕರ್ತರು ಭಾಗವಹಿಸಬೇಕೆಂದರು.

ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾರ್ಯಕರ್ತರ ಹತ್ಯೆ ನಡೆಯುತ್ತಿದ್ದು, ಜಾಗೃತರಾಗುವಂತೆ ಸೂಚಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಈ ಹಿಂದೆ ಕಾಂಗ್ರೆಸ್ ಸರಕಾರ ಆಡಳಿತದಲ್ಲಿದ್ದಾಗ. ಸರಕಾರದ ನ್ಯೂನತೆಗಳನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದೆವು. ಆದರೀಗ ದೇಶ ಹಾಗೂ ರಾಜ್ಯದಲ್ಲೂ ನಮ್ಮದೇ ಸರಕಾರವಿದ್ದು ಸರಕಾರದ ಸಾಧನೆ, ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸೌಲಭ್ಯಗಳನ್ನು ಮನೆಮನೆಗಳಿಗೆ ತೆರಳಿ ತಿಳಿಸುವಂತೆ ಕಾರ್ಯಕರ್ತರು ಶ್ರಮವಹಿಸಬೆೆÃಕಾಗಿದೆ ಎಂದರು.

ಸಭೆಯಲ್ಲಿ ಎಮ್.ಎಲ್.ಸಿ ಸುಜಾ ಕುಶಾಲಪ್ಪ, ಸಂಘದ ಮಂಗಳೂರು ಪ್ರಮುಖ ಉದಯಕುಮಾರ್ ಶೆಟ್ಟಿ, ಶಿಕ್ಷಣ ವರ್ಗದ ಪ್ರಮುಖರಾದ ಮಂಜುಳಾ, ಬಿ.ಜೆ.ಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಇದ್ದರು.