ಮಡಿಕೇರಿ, ಫೆ. ೨೨: ಕಾಕೂರು, ಕೆ. ಬಾಡಗ ಗ್ರಾಮದ ಶ್ರೀ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನದ ವಾರ್ಷಿಕ ಉತ್ಸವ ತಾ. ೧೯ರಿಂದ ಆರಂಭಗೊAಡಿದೆ. ತಾ. ೨೭ರವರೆಗೆ ದೇವರ ಬಳಕು, ಹರಕೆ ಬಳಕು ಪೂಜಾ ಕಾರ್ಯಗಳು ಜರುಗಲಿದ್ದು, ತಾ. ೨೮ರಂದು ಸಂಜೆ ೫ಕ್ಕೆ ನೆರಪು, ದೇವರು ಹೊರಗೆ ಬರುವುದು ಹಾಗೂ ಮಾರ್ಚ್ ೧ರಂದು ಮಹಾಶಿವರಾತ್ರಿ ನಡೆಯಲಿದೆ. ಮಾ. ೧ರಂದು ಬೆಳಿಗ್ಗೆ ೪ ರಿಂದ ೧೨ ಗಂಟೆ ತನಕ ರುದ್ರಾಭಿಷೇಕ ಪೂಜೆ, ಸಂಜೆ ೫ಕ್ಕೆ ದೇವರ ಅವಭೃತ ಸ್ನಾನ, ಬಳಿಕ ವಸಂತ ಪೂಜೆ, ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.