ಮಡಿಕೇರಿ, ಫೆ. ೨೨ : ಶ್ರೀ ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡವ ಹಾಗೂ ಅಮ್ಮಕೊಡವ ಜನಾಂಗದ ಶಾಪ ವಿಮೋಚನೆಗಾಗಿ ಪ್ರಾರ್ಥಿಸಿ ಈ ಹಿಂದಿನ ವರ್ಷಗಳಿಂದ ನಡೆಸಲಾಗುತ್ತಿರುವ ವಿಶೇಷ ಪೂಜಾ ಕಾರ್ಯ ಈ ಬಾರಿ ಮಾರ್ಚ್ ೪ರಂದು ನಡೆಯಲಿದೆ. ಅಂದು ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದ ಬಯಲು ಪ್ರದೇಶದಲ್ಲಿನ ಜಾಗದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ ಹಾಗೂ ಶತರುದ್ರಾಭಿಷೇಕ ಪಠಣ ಕಾರ್ಯ ಜರುಗಲಿದೆ.