ಗೋಣಿಕೊಪ್ಪ ವರದಿ, ಫೆ. ೨೨: ಅರಣ್ಯ ಇಲಾಖೆ ವತಿಯಿಂದ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಾಲ್ಕು ಕಾಡಾನೆಗಳಿಗೆ ರೇಡಿಯೋ ಕಾಲರ್ ಗೋಣಿಕೊಪ್ಪ ವರದಿ, ಫೆ. ೨೨: ಅರಣ್ಯ ಇಲಾಖೆ ವತಿಯಿಂದ ತಿತಿಮತಿ ವಲಯ ಅರಣ್ಯ ವ್ಯಾಪ್ತಿಯಲ್ಲಿ ನಾಲ್ಕು ಕಾಡಾನೆಗಳಿಗೆ ರೇಡಿಯೋ ಕಾಲರ್ ಒಂದು ಗಂಡಾನೆಗೆ ಕಾಲರ್ ಅಳವಡಿಸಲಾಯಿತು.

ಅಬ್ಬೂರು, ತಾರಿಕಟ್ಟೆ, ಹೊಸಳ್ಳಿ, ದೇವರಪುರ ದೇವರಕಾಡಿನಲ್ಲಿ ಕಾರ್ಯಾಚರಣೆ ನಡೆಸಿ ಅಳವಡಿಸಿದರು. ಅನನ್ಯ, ಆಕಾಂಕ್ಷಾ, ಮಖ್ನಾ ಮತ್ತು ಅಯ್ಯಪ್ಪ ಎಂದು ಕಾಲರ್ ಅಳವಡಿಸಿದ ಆನೆಗಳಿಗೆ ಹೆಸರಿಡಲಾಗಿದೆ. ವೈದ್ಯರಾದ ಡಾ.ಸನತ್ ಮುಳಿಯ, ಡಾ. ಸಿ. ಕೆ. ತಮ್ಮಯ್ಯ, ಪಶು ವೈದ್ಯ ಸಹಾಯಕರಾಗಿ ಅಕ್ರಮ್ ಖಾನ್, ಡಯಾಲತ್ ಭಾಗವಹಿಸಿದ್ದರು. ಸಾಕಾನೆಗಳಾದ ಅಭಿಮನ್ಯು, ಮಹೇಂದ್ರ, ಧನಂಜಯ,ಸುಗ್ರೀವ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಯಿತು.

ಕೊಡಗು ಸಿಸಿಎಫ್ ಡಾ. ಶಂಕರ್, ತಿತಿಮತಿ ಎಸಿಎಫ್ ಪಿ.ಪಿ.ಉತ್ತಪ್ಪ, ವೀರಾಜಪೇಟೆ ರೋಶ್ನಿ, ತಿತಿಮತಿ ಆರ್‌ಎಫ್‌ಒ ಅಶೋಕ್, ಡಿಆರ್‌ಎಫ್‌ಒ ಉಮಾಶಂಕರ್, ಡಾ.ರಮೇಶ್ ಹುಲಿಯಾ, ನಿವೃತ್ತ ಡಿಸಿಎಫ್ ಎಂ. ಜಯ, ಡಾ. ಬಿ.ನವನೀತ್ ಇದ್ದರು.