ಮಡಿಕೇರಿ, ಫೆ. ೨೧: ಮಡಿಕೇರಿಯ ಗಣಪತಿ ಬೀದಿ ರಸ್ತೆ ಕಾಮಗಾರಿ ಸಂದರ್ಭದಲ್ಲಿ ತೆರವು ಮಾಡಲಾಗಿರುವ, ದಾನಿ ದಿವಂಗತ ಕೊಂಗAಡ ಎಸ್.ಗಣಪತಿ ಅವರ ಹೆಸರಿನ ಸ್ಮಾರಕ ನಾಮಫಲಕವನ್ನು ಮತ್ತೆ ಸರಿಪಡಿಸಿ ಅಳವಡಿಸಬೇಕೆಂದು ಶ್ರೀ ಮುತ್ತಪ್ಪ ಕೊಡವಕೇರಿ ಸಂಘ ಆಗ್ರಹಿಸಿದೆ. ಸಂಘದ ಪದಾಧಿಕಾರಿಗಳು ಈ ಬಗ್ಗೆ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಆಯುಕ್ತ ರಾಮ್ದಾಸ್ ಅವರುಗಳಿಗೆ ಲಿಖಿತ ಮನವಿ ಸಲ್ಲಿಸಿ ಈ ಬಗ್ಗೆ ಕ್ರಮಕ್ಕೆ ಮನವಿ ಮಾಡಿದರು. ದಿವಂಗತ ಗಣಪತಿ ಅವರು ನೀಡಿರುವ ಕೊಡುಗೆಯನ್ನು ಮರೆಯಬಾರದು. ಈ ನಿಟ್ಟಿನಲ್ಲಿ ಅವರ ಹೆಸರಿನ ಸ್ಮಾರಕ ಫಲಕವನ್ನು ಸೂಕ್ತ ಸ್ಥಳದಲ್ಲಿ ಮತ್ತೆ ಸಮರ್ಪಕಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಅಲ್ಲದೆ, ಗಣಪತಿ ಬೀದಿಯ ತುದಿಯಲ್ಲಿ ಬರುವ ನೀರಿನ ಟ್ಯಾಂಕ್ನ ಬಳಿ ಉದ್ಯಾನವನ ನಿರ್ಮಾಣ ಹಾಗೂ ಪ್ರಸ್ತುತ ನಡೆಯುತ್ತಿರುವ ರಸ್ತೆ ಕೆಲಸವನ್ನು ತ್ವರಿತವಾಗಿ ಮುಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆಯೂ ಪದಾಧಿಕಾರಿಗಳು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಶಾಂತೆಯAಡ ಸನ್ನಿ ಪೂವಯ್ಯ, ಪ್ರಮುಖರಾದ ಮುಂಡAಡ ಗಾಂಧಿ, ಕನ್ನಂಡ ಸುಧಾ ಬೊಳ್ಳಪ್ಪ, ಕುಪ್ಪಂಡ ವಸಂತ್, ಪಾಡೆಯಂಡ ಮಣಿ ಮೇದಪ್ಪ, ಅಲ್ಲಾರಂಡ ರವಿ, ಶಾಂತೆಯAಡ ವಿಶಾಲ್ ಅಚ್ಚಯ್ಯ, ಕಿಸು ದೇವರಾಜ್ ಪಾಲ್ಗೊಂಡಿದ್ದರು.