ನಾಪೆೆÇÃಕ್ಲು, ಫೆ. ೨೧: ಬೇತು ಗ್ರಾಮದ ಮುಂಡAಡ ಪೊನ್ನಪ್ಪ ಎಂಬವರ ಕಾಫಿ ತೋಟದ ಬದಿಯಲ್ಲಿ ಅಪರಿಚಿತ ಮೃತ ದೇಹವೊಂದು ಪತ್ತೆಯಾಗಿದೆ. ಅಂದಾಜು ೩೦ ರ ಪ್ರಾಯವಿರಬಹುದಾಗಿದ್ದು, ಮೃತ ವ್ಯಕ್ತಿಯು ತಲೆ ಕೂದಲು ಬೋಳಿಸಿದ್ದು, ಮುಖ ಕಪ್ಪು ಬಣ್ಣ ಇದ್ದು, ನೀಲಿ ಬಣ್ಣದ ಪ್ಯಾಂಟ್ ಮತ್ತು ಗೆರೆ ಇರುವ ನೀಲಿ ಬಣ್ಣದ ಶರ್ಟ್ ಧರಿಸಿದ್ದು, ಪಕ್ಕದಲ್ಲೇ ಒಂದು ಬ್ಯಾಗ್ ಪತ್ತೆಯಾಗಿದ್ದು, ಸ್ಥಳಕ್ಕೆ ನಾಪೆÉÇÃಕ್ಲು ಠಾಣಾಧಿಕಾರಿ ಸದಾಶಿವರವರು ಸಿಬ್ಬಂದಿಯವರೊAದಿಗೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ತಿಳಿದು ಬಂದಲ್ಲಿ ನಾಪೆÉÇÃಕ್ಲು ಪೊಲೀಸ್ ಠಾಣೆ ೦೮೨೭೨-೨೩೭೨೪೦ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.
- ದುಗ್ಗಳ ಸದಾನಂದ