ಮಡಿಕೇರಿ, ಫೆ. ೨೧: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ತಾ. ೨೪, ೨೫ ಮತ್ತು ೨೬ರಂದು ವೈದ್ಯರು ಲಭ್ಯವಿರುವುದಿಲ್ಲ. ಮಾ. ೧ರಂದು ದಂತ ವೈದ್ಯರು ಇರುವುದಿಲ್ಲ. ತಾ. ೨೮ರಂದು ಮಾಸಿಕ ಲೆಕ್ಕ ತಪಾಸಣೆ ಇರುವುದರಿಂದ ಮಾತ್ರೆಗಳ ವಿತರಣೆ ಇರುವುದಿಲ್ಲ. ತುರ್ತು ಚಿಕಿತ್ಸೆಗೆ ಮಾತ್ರ ವೈದ್ಯರು ಲಭ್ಯವಿರುತ್ತಾರೆ. ಮಾಜಿ ಸೈನಿಕರು ಹೊಸ ೬೪ ಕೆ.ಬಿ. ಕಾರ್ಡ್ಗಳ ಮಾಹಿತಿಗಳನ್ನು ೦೮೨೭೨-೨೨೦೦೨೪ ದೂರವಾಣಿಗೆ ಕರೆ ಮಾಡಿ ಪಡೆದುಕೊಳ್ಳಬಹುದು. ಆದಷ್ಟು ಬೇಗ ತಮ್ಮ ಕಾರ್ಡ್ಗಳನ್ನು ಪಡೆದುಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.