ಮಡಿಕೇರಿ, ಫೆ. ೨೨: ನಾಗರಹೊಳೆ ವನ್ಯಜೀವಿ ಮೀಸಲು ಅರಣ್ಯ ವ್ಯಾಪ್ತಿಯ ತಟ್ಟಳ್ಳಿಯಲ್ಲಿ ಹುಲಿಯೊಂದನ್ನು ಹತ್ಯೆಗೈದು ಅದರ ಚರ್ಮ, ಉಗುರು ಇನ್ನಿತರ ಭಾಗಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಬಂಧನಕ್ಕೊಳಗಾಗಿರುವ ಆರೋಪಿಗಳ ಪೈಕಿ ಪ್ರಮುಖ ಆರೋಪಿ ಪೊಲೀಸರೊಂದಿಗೆ ಮಾಹಿತಿದಾರನಾಗಿ ಗುರುತಿಸಿಕೊಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ..!

ತಾ. ೧೪ ರಂದು ಮಡಿಕೇರಿ ಅರಣ್ಯ ಸಂಚಾರಿ ದಳದವರು ಸಿದ್ದಾಪುರ ಮಾಲ್ದಾರೆ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿ ಹುಲಿಯ ಚರ್ಮ ಮಾರಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ತಟ್ಟಳ್ಳಿ ಹಾಡಿಯ ರಾಜೇಶ, ಹರೀಶ, ವಿನು, ರಮೇಶ ಅವರನ್ನು ಬಂಧಿಸಿ ಮುಂದಿನ ತನಿಖೆಗೆ ಸ್ಥಳದಲ್ಲೇ ಆರ್.ಎಫ್.ಓ. ತಿತಿಮತಿ ಅವರಿಗೆ ವಹಿಸಲಾಗಿತ್ತು. ಆದರೆ ಸಿ.ಐ.ಡಿ. ಅರಣ್ಯ ಘಟಕ ಮಡಿಕೇರಿ ಸಂಚಾರಿ ದಳದವರು ಪ್ರಕರಣದ ಮುಖ್ಯ ಆರೋಪಿ ಎನ್ನಲಾಗಿದ್ದ ಮನೋಜ್ ಎಂಬಾತನನ್ನು ಬಿಟ್ಟು ಆಮಿಷಕ್ಕೊಳಗಾಗಿ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಹಾಡಿಯ ಕಾರ್ಮಿಕರನ್ನು ಬಂಧಿಸಲಾಗಿದೆ ಎಂದು ಸಾರ್ವಜನಿಕ

(ಮೊದಲ ಪುಟದಿಂದ) ವಲಯದಲ್ಲಿ ಪ್ರಕರಣದ ಬಗ್ಗೆ ಸಂಶಯ ವ್ಯಕ್ತವಾಗಿತ್ತು.

ಪ್ರಕರಣದಲ್ಲಿ ಮುಖ್ಯ ಆರೋಪಿಯಾದ ಮನೋಜ್ ಮಡಿಕೇರಿ ಅರಣ್ಯ ಸಂಚಾರಿ ದಳದವರಿಗೆ ತಾನೂ ಎಲ್ಲಿ ಸಿಕ್ಕಿಹಾಕಿಕೊಳ್ಳುತ್ತೇನೆಂದು ಹೆದರಿ ಮಾಹಿತಿದಾರನಂತೆ ಗುರುತಿಸಿ ಕೊಂಡಿದ್ದ. ಅಲ್ಲದೆ ನಾಲ್ಕು ಹಾಡಿಯ ಆರೋಪಿಗಳಲ್ಲಿ ಸ್ಥಳದಲ್ಲಿ ಈತನ ಬಗ್ಗೆ ವಿಚಾರಣೆ ನಡೆಸಿದಾಗ ಮನೋಜ್ ಬಗ್ಗೆ ಯಾವುದೇ ವಿಚಾರ ತಿಳಿಸದೇ ಮರೆ ಮಾಚಿದ್ದರು. ನಂತರ ಈ ಹುಲಿ ಹತ್ಯೆಯು ದಿಡ್ಡಳ್ಳಿ ಅರಣ್ಯದಲ್ಲಾಗಿದ್ದು, ಈ ಪ್ರದೇಶ ನಾಗರಹೊಳೆ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದಲ್ಲಿ ಆದ ಕಾರಣ ಸಿಐಡಿ ಅರಣ್ಯ ಘಟಕ ಮಡಿಕೇರಿ ಸಂಚಾರಿ ದಳದವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರಕರಣವನ್ನು ವಹಿಸಿದ್ದಾರೆ.

ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಮನೋಜ್ ಹಾಗೂ ಅಪ್ಪಾಜಿ ಪ್ರಕರಣದಲ್ಲಿ ಪ್ರಮುಖ ಸೂತ್ರದಾರಿಗಳೆಂದು ತಿಳಿದು ಬಂದಿದೆ. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಮಡಿಕೇರಿ ಅರಣ್ಯ ಸಂಚಾರಿದಳದವರಿಗೆ ಈ ವಿಚಾರವನ್ನು ತಿಳಿಸಿದಾಗ ಕೂಡಲೇ ಸಿಐಡಿ ಅರಣ್ಯ ಘಟಕ ಮಡಿಕೇರಿ ಸಂಚಾರಿ ದಳದವರು ಆರೋಪಿ ಮನೋಜ್ ಹಾಗೂ ಆತನ ಕಾರನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ. ಅವರು ಆತನನ್ನು ವಿಚಾರಣೆ ಮಾಡಿ ಆತನಿಂದ ಪ್ರಕರಣಕ್ಕೆ ಸಂಬAಧಿಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹುಲಿ ಹತ್ಯೆ ನಡೆದು ಸುಮಾರು ಒಂದೂವರೆ ತಿಂಗಳು ಕಳೆದರೂ ಪ್ರಕರಣವನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಮಾಹಿತಿ ಆಧಾರದಲ್ಲಿ ಸಿಐಡಿ ಅರಣ್ಯ ಘಟಕ ಮಡಿಕೇರಿ ಸಂಚಾರಿ ದಳದವರು ಪ್ರಕರಣ ಬೇಧಿಸಿದ್ದು, ಪ್ರಕರಣಕ್ಕೆ ಸಂಬAಧಿಸಿದAತೆ ಹಾಡಿ ಮುಖಂಡ, ಗ್ರಾ.ಪಂ. ಸದಸ್ಯ ಅಪ್ಪಾಜಿ ಸೇರಿದಂತೆ ೬ ಮಂದಿಯನ್ನು ಬಂಧಿಸಲಾಗಿದೆ. ?ಸಂತೋಷ್