ಗುಡ್ಡೆಹೊಸೂರು, ಫೆ. ೨೨: ಸಮೀಪದ ಅತ್ತೂರು ಗ್ರಾಮದ ಶ್ರೀ ಪಂಚಲಿAಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಉತ್ಸವಗಳು ನಡೆಯಲಿವೆ. ತಾ. ೨೮ ಹಾಗೂ ಮಾರ್ಚ್ ತನಕ ವಿವಿಧ ದೇವತಾ ಕಾರ್ಯಗಳು ನಡೆಯಲಿವೆ. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಗಣೇಶ್ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.
ತಾ. ೨೮ ರಂದು ರಾತ್ರಿ ೮ ಗಂಟೆಗೆ ಮಹಾಪೂಜೆ ನಡೆಯಲಿದೆ. ಮಾ. ೧ರಂದು ಬೆಳಿಗ್ಗೆ ೬ ಗಂಟೆಯಿAದ ಕಲಶ ಪ್ರತಿಷ್ಠೆ, ನಂತರ ಗಣಪತಿ ಹೋಮ, ನಂತರ ವಿವಿಧ ಪೂಜಾ ಕಾರ್ಯ ರಾತ್ರಿ ೧೨ ಗಂಟೆಯ ತನಕ ನಡೆಯಲಿದೆ. ಮಾ. ೨ ಬುಧವಾರ ಬೆಳಿಗ್ಗೆ ೭ ಗಂಟೆಗೆ ನವಕ ಕಲಶ ಪ್ರತಿಷ್ಠೆ ಗಣಪತಿ ಹೋಮ ನವಕ ಕಲಶಾಭಿಷೇಕ, ಶ್ರೀ ದೇವರ ಪೂಜೆ ನಂತರ ಪ್ರಸಾದ ವಿತರಣೆ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ.