ಮಡಿಕೇರಿ, ಫೆ. ೨೨: ಕೊಡಗು ಸಂಪಾಜೆ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಡಿಜಿಟಲ್ ಸೇವಾ ಕೇಂದ್ರ ಪ್ರಾರಂಭಗೊAಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಭರತ್ ವಹಿಸಿದ್ದರು.

ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್ ಚೆದ್ಕಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ನೋಡಲ್ ಅಧಿಕಾರಿ ಹರ್ಷ, ತಾಲೂಕು ಸಮನ್ವಯಾಧಿಕಾರಿ ಭರತ್, ಇಬ್ರಾಹಿಂ ಮಾಸ್ಟರ್, ಹೊನ್ನಪ್ಪ ಪಡ್ಪು, ಕೊರಗಪ್ಪ ಅರಮನೆ ತೋಟ, ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ವಲಯದ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು. ಕೆ.ಸಿ. ಮೀನಕುಮಾರಿ ಪ್ರಾರ್ಥಿಸಿ, ವಲಯ ಮೇಲ್ವಿಚಾರಕಿ ಜಯಶ್ರೀ ಸ್ವಾಗತಿಸಿದರು. ಸಂಪಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಕೆ.ವಿ. ಪುಷ್ಪಾವತಿ ವಂದಿಸಿದರು.