ಮಡಿಕೇರಿ, ಫೆ. ೨೨: ಬಾಡಗರಕೇರಿಯಲ್ಲಿನ ಶ್ರೀ ಮೃತ್ಯುಂಜಯ ದೇವಸ್ಥಾನ ವಾರ್ಷಿಕ ಉತ್ಸವ ತಾ. ೧೩ ರಿಂದ ಜರುಗುತ್ತಿದ್ದು, ತಾ ೨೩ರಂದು (ಇಂದು) ದೇವರ ಅವಭೃತ ಸ್ನಾನದೊಂದಿಗೆ ಸಂಪನ್ನಗೊಳ್ಳಲಿದೆ. ಉತ್ಸವದ ಪ್ರಯುಕ್ತ ಬೆ. ೧೦ ರಿಂದ ನಿತ್ಯಪೂಜೆ, ೧೨ ಗಂಟೆಗೆ ತುಲಾಭಾರ, ಅಪರಾಹ್ನ ೩ಕ್ಕೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಸಂಜೆ ೫ಕ್ಕೆ ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಮತ್ತೆ ಉತ್ಸವ ಮೂರ್ತಿ ದರ್ಶನ ಹಾಗೂ ಬಳಿಕ ವಸಂತ ಪೂಜೆ ಜರುಗಲಿದೆ. ಗುರುವಾರ ಬೆ. ೧೦.೩೦ಕ್ಕೆ ಕೊಡಿಮರ ಇಳಿಸುವುದು ಹಾಗೂ ನಂತರದಲ್ಲಿ ಎಂದಿನAತೆ ಬೆ. ೧೧ ರಿಂದ ನಿತ್ಯಪೂಜೆ ನಡೆಯಲಿದೆ.