ಮಡಿಕೇರಿ, ಫೆ. ೨೧: ಎಂ.ಎಸ್.ಎA.ಇ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಪ್ರತಿ (ಒiಛಿಡಿo, Smಚಿಟಟ ಚಿಟಿಜ ಒeಜium ಇಟಿಣeಡಿಠಿಡಿises) ವರ್ಷದಂತೆ ವ್ಯಾಪಾರಕ್ಕನುಸಾರವಾಗಿ ಸ್ಥಳೀಯ ಸಂಸ್ಥೆಗಳಿAದ ಪಡೆಯುವ ವ್ಯಾಪಾರ ಪರವಾನಗಿ ಪತ್ರದ ನವೀಕರಣ ಪದ್ಧತಿಗೆ ೨೦೧೫ರಲ್ಲಿಯೇ ವಿನಾಯಿತಿ ದೊರೆತಿದೆಯಾದರೂ ಕೆಲವೊಂದು ಉದ್ಯಮಗಳಿಗೆ ಈ ಬಗ್ಗೆ ಅರಿವಿಲ್ಲದೆ, ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಂಚಾಯಿತಿ ಇತ್ಯಾದಿಗಳಿಗೆ ವರ್ಷಂಪ್ರತಿ ಇಂತಿಷ್ಟು ಮೊತ್ತ ನೀಡಿ ಈಗಾಗಲೇ ವಿನಾಯಿತಿ ದೊರಕಿರುವ ಪರವಾನಗಿಯನ್ನು ಅನಾವಶ್ಯಕವಾಗಿ ನವೀಕರಣಗೊಳಿಸುತ್ತಿವೆ.
ಪ್ರಸ್ತುತ ಹೊಸ ಎಂ.ಎಸ್.ಎA.ಇ. ಉದ್ದಿಮೆಗಳನ್ನು ಸ್ಥಾಪಿಸುವುದಾಗಲಿ, ಈಗಾಗಲೇ ಇರುವ ಉದ್ದಿಮೆಗಳನ್ನು ನೋಂದಾಯಿಸುವುದಾಗಲಿ ಎಲ್ಲವೂ ಉಚಿತ ಹಾಗೂ ಶಾಶ್ವತ ‘ಉದ್ಯಮ್ ನೋಂದಣಿ’ ಮಡಿಕೇರಿ, ಫೆ. ೨೧: ಎಂ.ಎಸ್.ಎA.ಇ. ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಪ್ರತಿ (ಒiಛಿಡಿo, Smಚಿಟಟ ಚಿಟಿಜ ಒeಜium ಇಟಿಣeಡಿಠಿಡಿises) ವರ್ಷದಂತೆ ವ್ಯಾಪಾರಕ್ಕನುಸಾರವಾಗಿ ಸ್ಥಳೀಯ ಸಂಸ್ಥೆಗಳಿAದ ಪಡೆಯುವ ವ್ಯಾಪಾರ ಪರವಾನಗಿ ಪತ್ರದ ನವೀಕರಣ ಪದ್ಧತಿಗೆ ೨೦೧೫ರಲ್ಲಿಯೇ ವಿನಾಯಿತಿ ದೊರೆತಿದೆಯಾದರೂ ಕೆಲವೊಂದು ಉದ್ಯಮಗಳಿಗೆ ಈ ಬಗ್ಗೆ ಅರಿವಿಲ್ಲದೆ, ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಂಚಾಯಿತಿ ಇತ್ಯಾದಿಗಳಿಗೆ ವರ್ಷಂಪ್ರತಿ ಇಂತಿಷ್ಟು ಮೊತ್ತ ನೀಡಿ ಈಗಾಗಲೇ ವಿನಾಯಿತಿ ದೊರಕಿರುವ ಪರವಾನಗಿಯನ್ನು ಅನಾವಶ್ಯಕವಾಗಿ ನವೀಕರಣಗೊಳಿಸುತ್ತಿವೆ.
ಪ್ರಸ್ತುತ ಹೊಸ ಎಂ.ಎಸ್.ಎA.ಇ. ಉದ್ದಿಮೆಗಳನ್ನು ಸ್ಥಾಪಿಸುವುದಾಗಲಿ, ಈಗಾಗಲೇ ಇರುವ ಉದ್ದಿಮೆಗಳನ್ನು ನೋಂದಾಯಿಸುವುದಾಗಲಿ ಎಲ್ಲವೂ ಉಚಿತ ಹಾಗೂ ಶಾಶ್ವತ ‘ಉದ್ಯಮ್ ನೋಂದಣಿ’ ಕೆಳಕಂಡದನ್ನು ಸೇರಿಸಿಕೊಳ್ಳಲಾಗುವುದು.
೨೦೦೬ರ ‘ಕೇಂದ್ರ ಕಾಯ್ದೆ ೨೭’ ರಡಿಯಲ್ಲಿ, ಸಂಬAಧಿಸಿದ ಜಿಲ್ಲಾ ಕೈಗಾರಿಕಾ ಕೇಂದ್ರಗಳಲ್ಲಿ ನೋಂದಣಿಯಾಗಿರುವ ಎಂ.ಎಸ್.ಎA.ಇ.ಗಳು ಹಾಗೂ ‘ಕೈಗಾರಿಕೆಗಳ ನೀತಿ’ ಅಡಿ ಕೈಗಾರಿಕೆಗಳ ಪರವಾನಗಿ ಪಡೆದ ಬೃಹತ್ ಕೈಗಾರಿಕೆೆಗಳು ವ್ಯಾಪಾರ ಪರವಾನಗಿಯಿಂದ ವಿನಾಯಿತಿ ಪಡೆದಿವೆ ಎಂದು ಸರಕಾರದ ಸಂಸದೀಯ ವ್ಯವಹಾರಗಳ ಆಗಿನ ಕಾರ್ಯದರ್ಶಿಯಾಗಿದ್ದ ಕೆ. ದ್ವಾರಕನಾಥ್ ಬಾಬು ಅವರು ಆದೇಶ ಹೊರಡಿಸಿದ್ದರು.
೨೦೨೦ ರಿಂದ ಉದ್ಯಮ್ ನೋಂದಣಿ ಪ್ರಾರಂಭ
೨೦೦೬ರ ಎಂ.ಎಸ್.ಎA.ಇ. ಡೆವೆಲಪ್ಮೆಂಟ್ ಕಾಯ್ದೆ ಪ್ರಕಾರ ಯಾವುದೇ ಎಂ.ಎಸ್.ಎA.ಇ. ಉದ್ಯಮಗಳು ಪ್ರಾರಂಭಿಸಿದಲ್ಲಿ ಇಒ (ಇಟಿಣeಡಿಠಿಡಿeಟಿeuಡಿ’s ಒemoಡಿಚಿಟಿಜum)ನಲ್ಲಿ ನೋಂದಣಿ ಕಡ್ಡಾಯವಾಗಿತ್ತು. ಹೊಸ ಉದ್ಯಮಗಳು ಸ್ಥಾಪಿಸುವಂತಿದ್ದರೆ ಇಒ-೧ ಹಾಗೂ ಈಗಾಗಲೇ ಇರುವ ಉದ್ಯಮಗಳನ್ನು ನೋಂದಾಯಿಸಲು ಇಒ-೨ ಫಾರ್ಮ್ ಮೂಲಕ ನೋಂದಣಿ ಮಾಡಲಾಗುತ್ತಿತ್ತು.
ನಂತರ ಇದನ್ನು ಬದಲಾವಣೆ ಮಾಡಿದ ಸರಕಾರ ೨೦೧೫ರ ಸೆಪ್ಟೆಂಬರ್ ೧೮ ರಿಂದ ಜಾರಿಗೆ ಬರುವಂತೆ ಇಒ ನೋಂದಣಿ ಬದಲು Uಂಒ (ಉದ್ಯೋಗ್ ಆಧಾರ್ ಮೆಮರ್ಯಾಂಡಮ್) ನೋಂದಣಿ ಪ್ರಾರಂಭಿಸಿತು. ಈ ಮೂಲಕ ಆನ್ಲೈನ್ನಲ್ಲಿಯೇ ಉದ್ಯಮಗಳ ನೋಂದಣಿಗೆ ಅವಕಾಶ ನೀಡಲಾಯಿತು. ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ವಿವರಗಳನ್ನೊಳಗೊಂಡ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ನೋಂದಣಿಯಾಗಬಹುದಿತ್ತು.
ಇದೀಗ ೨೦೨೦ ಜುಲೈ ೧ ರಿಂದ ಅನ್ವಯ ವಾಗುವಂತೆ ಕೆಲವೊಂದು ಬದಲಾವಣೆ ಗಳೊಂದಿಗೆ ಉದ್ಯಮ್ ನೋಂದಣಿ ಎಂಬ ಸಂಪೂರ್ಣ ಆನ್ಲೈನ್ ನೋಂದಣಿ ಪ್ರಾರಂಭವಾಗಿದ್ದು,
(ಮೊದಲ ಪುಟದಿಂದ) ಉದ್ಯಮ ಸ್ಥಾಪಿಸಲು ಹೂಡಿರುವ ಬಂಡವಾಳ, ರೂ.೧ ಕೋಟಿವರೆಗೆ ಇದ್ದು, ವಹಿವಾಟು ರೂ. ೫ ಕೋಟಿಯವರೆಗೆ ವಹಿವಾಟು ಇದ್ದರೆ ಅದನ್ನು ಅತಿ ಸಣ್ಣ ಉದ್ದಿಮೆಯಡಿ ಪರಿಗಣಿಸಲಾಗುತ್ತದೆ.
ರೂ. ೧ ಕೋಟಿಯಿಂದ ರೂ. ೧೦ ಕೋಟಿಯವರೆಗೆ ಬಂಡವಾಳ ಹೂಡಿಕೆ ಹಾಗೂ ರೂ. ೫೦ ಕೋಟಿವರೆಗಿನ ವಹಿವಾಟಿದ್ದರೆ, ಅದು ಸಣ್ಣ ಉದ್ದಿಮೆ ಎಂದು ಪರಿಗಣಿಸಲ್ಪಡುತ್ತದೆ.
ರೂ. ೧೦ ಕೋಟಿಯಿಂದ ರೂ. ೫೦ ಕೋಟಿವರೆಗಿನ ಬಂಡವಾಳ ಹೂಡಿಕೆ ಹಾಗೂ ರೂ.೨೫೦ ಕೋಟಿ ವರೆಗಿನ ವಹಿವಾಟು ಇದ್ದರೆ ಉದ್ದಿಮೆಯನ್ನು ಮಧ್ಯಮ ಉದ್ದಿಮೆ ಎಂದು ಪರಿಗಣಿಸಲಾಗುವುದು.
ಈ ಹಿಂದೆ ಇದ್ದ ಇಒ ಹಾಗೂ Uಂಒ ನೋಂದಣಿ ೨೦೨೧ರ ಮಾರ್ಚ್ ೩೧ ರಂದು ಅಸ್ತಿತ್ವ ಕಳೆದುಕೊಂಡಿದ್ದು, ಉದ್ದಿಮೆಗಳ ಉಚಿತ ಹಾಗೂ ಶಾಶ್ವತ ನೋಂದಣಿ ಸೌಲಭ್ಯವಾಗಿರುವ ಉದ್ಯಮ್ ನೋಂದಣಿಯೇ ಇವೆರಡರ ಸ್ಥಾನವನ್ನು ಪಡೆದಿದೆ.
ನೋಂದಣಿ ವಿಧಾನ
=ನೋಂದಣಿ ವಿಧಾನ ಸಂಪೂರ್ಣ ಡಿಜಿಟಲೈಸ್ ಆಗಿದ್ದು, hಣಣಠಿs://uಜಥಿಚಿmಡಿegisಣಡಿಚಿಣioಟಿ.gov.iಟಿ/ಉoveಡಿಟಿmeಟಿಣ-Iಟಿಜiಚಿ/ಒiಟಿisಣಡಿಥಿ-ಒSಒಇ-ಡಿegisಣಡಿಚಿಣioಟಿ.hಣm ಮೂಲಕ ಸುಲಭವಾಗಿ ನೋಂದಣಿ ಮಾಡಬಹುದು.
=ನೋಂದಣಿಗೆ ಯಾವುದೇ ವೆಚ್ಚ ಭರಿಸುವ ಅಗತ್ಯವಿಲ್ಲ. ಸಂಪೂರ್ಣ ಉಚಿತವಾಗಿದೆ.
=ನೋಂದಣಿಯ ಬಳಿಕ ‘ಉದ್ಯಮ್ ನೋಂದಣಿ ಪ್ರಮಾಣಪತ್ರ’ ಆನ್ಲೈನ್ ಮೂಲಕವೇ ಲಭ್ಯವಾಗಲಿದೆ. ಇದು ಭೌತಿಕ ಪತ್ರವಲ್ಲ. ಬದಲಿಗೆ ಇ-ಪ್ರಮಾಣ ಪತ್ರವಾಗಿರಲಿದೆ.
=ನೋಂದಣಿ ಸಂದರ್ಭ ಜಿ.ಎಸ್.ಟಿ ಸಂಖ್ಯೆ ನೀಡುವುದರಿಂದ ಸಂಸ್ಥೆಯ ಬಂಡವಾಳ ಹೂಡಿಕೆ, ಲಾಭಾಂಶ ಎಲ್ಲವೂ ಸುಲಭವಾಗಿ ಲಭ್ಯವಿರಲಿದೆ.
=ಎಂ.ಎಸ್.ಎA.ಇ. ಸಚಿವಾಲಯದಿಂದ ಉದ್ಯಮಗಳಿಗೆ ದೊರಕುವ ಸೌಲಭ್ಯಗಳಾದ ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್, ‘ಪಬ್ಲಿಕ್ ಪ್ರೊಕ್ಯೂರ್ಮೆಂಟ್ ಪಾಲಿಸಿ’ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ಉದ್ಯಮ್ ನೋಂದಣಿ ಸಹಾಯಕಾರಿಯಾಗಲಿದೆ.
-ಪ್ರಜ್ವಲ್ ಜಿ.ಆರ್.ಉದ್ಯಮ್ ನೋಂದಣಿ ಕೇವಲ ಒಂದು ಬಾರಿಗೆ ಅಷ್ಟೇ ಸೀಮಿತ. ಇದರ ನವೀಕರಣ ಅಗತ್ಯವಿಲ್ಲ. ಉದ್ಯಮ್ ನೋಂದಣಿ ಉಚಿತವಾಗಿದ್ದು, ಸಂಪೂರ್ಣ ಆನ್ಲೈನ್ ಮೂಲಕವೇ ಮಾಡಬೇಕಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಿ.ಎಸ್.ಟಿ. ಸಂಖ್ಯೆ, ಬ್ಯಾಂಕ್ ಪಾಸ್ಬುಕ್ಗಳಿದ್ದರೆ ಸಾಕು. ಹೊಸ ಉದ್ದಿಮೆಗಳಾಗಲಿ ಅಥವಾ ಈಗಾಗಲೇ ಚಾಲ್ತಿಯಲ್ಲಿರುವ ಉದ್ದಿಮೆಗಳಾಗಲಿ, ಉದ್ಯಮ ನೋಂದಣಿಯನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಸ್ಥಳೀಯ ಸಂಸ್ಥೆಗಳಿAದ ವ್ಯಾಪಾರ ಪರವಾನಗಿ ಪಡೆಯುವ ಅಗತ್ಯವಿಲ್ಲ. ಆದರೆ, ಇದು ಇನ್ನೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಕೆಲವು ಸ್ಥಳೀಯ ಸಂಸ್ಥೆಗಳು ಇನ್ನೂ ಪರವಾನಗಿ ನವೀಕರಣ ವ್ಯವಸ್ಥೆ ಪಾಲಿಸುತ್ತಿವೆ. ಸದ್ಯದಲ್ಲಿಯೇ ಸಚಿವ ಮುರುಗೇಶ್ ನಿರಾಣಿ ಅವರು ಈ ಬಗ್ಗೆ ಮತ್ತೊಮ್ಮೆ ಸ್ಪಷ್ಟವಾಗಿ ಆದೇಶ ಹೊರಡಿಸಲಿದ್ದಾರೆ.
ಈ ಹಿಂದೆ ಕೇವಲ ಕೈಗಾರಿಕಾ ವಲಯಕ್ಕೆ ಮಾತ್ರ ಉದ್ಯಮ್ ನೋಂದಣಿ ಅನ್ವಯವಾಗಿತ್ತು. ಇದೀಗ ಕೋವಿಡ್ ಸಂದರ್ಭದಿAದ ವ್ಯಾಪಾರ ವಲಯಕ್ಕೂ ನೋಂದಣಿ ಸೌಲಭ್ಯ ಒದಗಿಸುವಂತೆ ಸಚಿವರು ಆದೇಶಿಸಿದ್ದರು.
-ಶಂಕರ ನಾರಾಯಣ,
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು