ಮುಳ್ಳೂರು, ಫೆ. ೨೦: ಭಾರತ ಸೇವಾ ದಳ ಕೊಡಗು ಜಿಲ್ಲಾ ಘಟಕ ಮತ್ತು ಆಲೂರುಸಿದ್ದಾಪುರ ಸರಕಾರಿ ಪ.ಪೂ .ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಪ.ಪೂ. ಕಾಲೇಜು, ಪ್ರೌಢಶಾಲಾ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಹಾಗೂ ಕೋವಿಡ್-೧೯ ಕುರಿತು ಜಾಗೃತಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸೇವಾ ದಳದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಕರುಂಬಯ್ಯ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಸೇವಾ ದಳದ ಸ್ಥಾಪಕ ನಾ.ಸು. ಹರ್ಡಿಕರ್ ಅವರು ಸ್ವತಂತ್ರ ಪೂರ್ವದಲ್ಲಿ ಜಾತ್ಯತೀತ, ಪಕ್ಷಾತೀತ, ಹಾಗೂ ಸರ್ವಧರ್ಮ ದವರು ಸಂಘಟನೆಯಲ್ಲಿರಬೇಕೆAಬ ಉದ್ದೇಶದಿಂದ ಸೇವಾದಳವನ್ನು ಸ್ಥಾಪಿಸಿದರು.
ರಾಷ್ಟçಭಕ್ತಿ, ದೇಶಪ್ರೇಮ, ಶಿಸ್ತು ನಿಯಮಗಳಿಗೆ ಭಾರತ ಸೇವಾದಳ ಹೆಸರುವಾಸಿಯಾಗಿದ್ದು, ಶಾಲೆಗಳಲ್ಲಿ ಭಾರತ ಸೇವಾ ದಳದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಶಾಲೆಗಳಲ್ಲಿ ಶಿಕ್ಷಕರು ಸೇವಾದಳದ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅವರಿಗೆ ಸೇವಾದಳದ ಉದ್ದೇಶದ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು. ಭಾರತ ಸೇವಾದಳ ಘಟಕದ ಮೂಲಕ ಶಾಲಾ ಮಕ್ಕಳಿಗೆ ಕೋವಿಡ್ ಜಾಗೃತಿ ಹಾಗೂ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ.ಪೂ. ಕಾಲೇಜು ಹಿರಿಯ ಉಪನ್ಯಾಸಕ ಗಣಪತಿ ಭಟ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾರತ ಸೇವಾ ದಳದ ಜಿಲಾ ಘಟಕದ ಉಮೇಶ್, ಹಿರಿಯ ಉಪನ್ಯಾಸಕ ಮಲ್ಲೇಶ್, ಉಪನ್ಯಾಸಕಿ ನಿರೀಕ್ಷಾ ಮುಂತಾದವರಿದ್ದರು.