ಕೂಡಿಗೆ, ಫೆ. ೨೦: ಮಡಿಕೇರಿಯಲ್ಲಿರುವ ೫ನೇ ತರಗತಿಯ ಕ್ರೀಡಾ ನಿಲಯಕ್ಕೆ ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಮಟ್ಟದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯು ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.

ಆಯ್ಕೆ ಪ್ರಕ್ರಿಯೆಗೆ ಕ್ರೀಡಾಶಾಲೆ ಮುಖ್ಯೋಪಾಧ್ಯಾಯ ದೇವಕುಮಾರ್ ಚಾಲನೆ ನೀಡಿದರು.

ಎರಡು ತಾಲೂಕಿನ ೩೪ ವಿದ್ಯಾರ್ಥಿಗಳು ವಿವಿಧ ಕ್ರೀಡಾ ಪ್ರದರ್ಶನ ನೀಡುವ ಮೂಲಕ ಭಾಗವಹಿಸಿದ್ದರು. ಈ ಸಂದರ್ಭ ಕ್ರೀಡಾ ತರಬೇತುದಾರರಾದ ವೆಂಕಟೇಶ್, ಬಿಂದು, ಸುಬ್ಬಯ್ಯ, ಮಂಜುನಾಥ, ಮಹಾಬಲ ಹಾಜರಿದ್ದರು.