ಮಡಿಕೇರಿ, ಫೆ. ೨೧: ಜಿಲ್ಲೆಯ ಮಾಜಿ ಸೈನಿಕರ ಒಟ್ಟು ೨೪೫ ಕೃಷಿ ಜಮೀನು ಮಂಜೂರಾತಿಯ ಅರ್ಜಿಗಳು ಕಂದಾಯ ಇಲಾಖೆಯಲ್ಲಿ ಮಂಜೂರಾತಿಗಾಗಿ ಬಾಕಿ ಇದೆ ಎಂದು ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಪ್ರಶ್ನೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಉತ್ತರಿಸಿದರು.

ರಾಜ್ಯದ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಸಂಬAಧ ಕೈಗೊಂಡ ಕ್ರಮದ ಬಗ್ಗೆ ವೀಣಾ ಅಚ್ಚಯ್ಯ ಪ್ರಶ್ನಿಸಿ ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಲವು ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗೆ ಸಂಬAಧಿಸಿದAತೆ ಕಳೆದ ಮೂರು ವರ್ಷಗಳಲ್ಲಿ ಸರಕಾರ ವಿನಿಯೋಗಿಸಿರುವ ಅನುದಾನದ ವಿವರ ಹಾಗೂ ಅನುದಾನದಲ್ಲಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳೇನು? ಎಂದು ವಿವರ ಬಯಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಪಿಂಚಣಿ ಪಡೆಯುತ್ತಿರುವ ಮಾಜಿ ಸೈನಿಕರ ಮಕ್ಕಳಿಗೆ ಸೈನಿಕ ಶಿಷ್ಯ ವೇತನಕ್ಕೆ ಕಳೆದ ಮೂರು ವರ್ಷಗಳಲ್ಲಿ ರೂ, ೪,೭೫,೨೨೦, ಮಾಜಿ ಸೈನಿಕರ ಅವಲಂಬಿತರಿಗೆ ಮರಣ ಪರಿಹಾರಧನ ಸಹಾಯ ರೂ. ೭,೪೦ ಲಕ್ಷ, ಯುದ್ಧ ಕಾರ್ಯಾಚರಣೆಯಲ್ಲಿ ಶೌರ್ಯ/ಶೌರ್ಯೇತ್ತರ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರಕಾರದಿಂದ ನೀಡಿದ ನಗದು ಒಟ್ಟು ರೂ. ೨.೩೪ ಲಕ್ಷ, ಎರಡನೇ ಮಹಾಯುದ್ಧದಲ್ಲಿ ಸಕ್ರಿಯವಾಗಿ ಭಾಗವಹಿಸಿ ಪಿಂಚಣಿ ಇಲ್ಲದೆ ಬಿಡುಗಡೆಗೊಂಡ ಮಾಜಿ ಸೈನಿಕರಿಗೆ ಹಾಗೂ ಅವರು ಮೃತರಾದ ಬಳಿಕ ಅವರ ಪತ್ನಿಯರಿಗೆ ರಾಜ್ಯ ಸರಕಾರದಿಂದ ೨೦೧೯-೨೦ರಲ್ಲಿ ಒಟ್ಟು ರೂ. ೩೨.೭೦ ಲಕ್ಷ, ೨೦೨೦-೨೧ರಲ್ಲಿ ರೂ. ೧೯.೦೮ ಲಕ್ಷ ಗೌರವಧನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಮಾಜಿ ಸೈನಿಕರ ನ್ಯಾಯಸಮ್ಮತ ಬೇಡಿಕೆಗಳಿಗೆ ಸರಕಾರ ಕೈಗೊಂಡ ಕ್ರಮಗಳೇನೂ ಎಂಬ ವೀಣಾ ಪ್ರಶ್ನೆಗೆ ಉತ್ತರಿಸಿದ ಅರಗ ಜ್ಞಾನೇಂದ್ರ ಅವರು, ಕೊಡಗಿನಲ್ಲಿ ವಾಸಿಸುತ್ತಿರುವ ಎಲ್ಲಾ ಯುದ್ಧ ಸಂತ್ರಸ್ತರು ಮತ್ತು ಮಾಜಿ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿಗೆ ಸಂಬAಧಿಸಿದAತೆ ನ್ಯಾಯ ಸಮ್ಮತ ಬೇಡಿಕೆಗಳಿಗೆ ಹಾಗೂ ರಾಜ್ಯ ಸರಕಾರದಿಂದ

(ಮೊದಲ ಪುಟದಿಂದ) ನೀಡಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಸಮರ್ಪಕವಾಗಿ ಪೂರೈಸಲು ಸೂಕ್ತ ಕ್ರಮಕೈಗೊಳ್ಳಲಾಗಿರುತ್ತದೆ. ಮಾಜಿ ಸೈನಿಕರ ಎಲ್ಲಾ ಮನವಿಗಳಿಗೂ ಇಲಾಖೆಯಿಂದ ಸೂಕ್ತವಾಗಿ ಸ್ಪಂದಿಸಲಾಗಿದೆ ಎಂದರು.

ವಿಶೇಷ ಪ್ಯಾಕೇಜ್ ಪ್ರಸ್ತಾವನೆ ಇಲ್ಲ

ಕೊಡಗು ಜಿಲ್ಲೆಯ ಪ್ರಮುಖ ಮುಂಗಾರು ಹಂಗಾಮಿನ ಬೆಳೆಯಾದ ಭತ್ತದ ಕೃಷಿ ಪ್ರೋತ್ಸಾಹಕ್ಕೆ ಯಾವುದೇ ರೀತಿ ವಿಶೇಷ ಪ್ಯಾಕೇಜ್ ಘೋಷಿಸುವ ಪ್ರಸ್ತಾವನೆ ಇಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್, ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದರು.

ಜಿಲ್ಲೆಯಲ್ಲಿ ಕೃಷಿ ಕಾರ್ಮಿಕರ ಕೊರತೆ, ವನ್ಯಜೀವಿ ಹಾವಳಿ, ಗುಡ್ಡಗಾಡು ಪ್ರದೇಶದಲ್ಲಿ ಕೃಷಿ ಯಂತ್ರೋಪಕರಣಗಳ ಬಳಕೆ ಕಷ್ಟದಾಯಕವಾಗಿರುವುದು ಕೃಷಿ ಜಮೀನು ಪಾಳುಬಿಡಲು ಕಾರಣವಾಗಿದೆ ಎಂದು ಬಿ.ಸಿ. ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕೃಷಿ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಆತ್ಮಯೋಜನೆ, ಕೃಷಿ ವಿಸ್ತಿçÃರ್ಣ ಮತ್ತು ತರಬೇತಿ ಕಾರ್ಯಕ್ರಮಗಳಡಿಯಲ್ಲಿ ಭತ್ತ ಬೆಳೆಯನ್ನು ಪ್ರೋತ್ಸಾಹಿಸುವ ಸಲುವಾಗಿ ರೈತರಿಗಾಗಿ ತರಬೇತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ ಮತ್ತು ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಹಾಯಧನದಡಿಯಲ್ಲಿ ಕೃಷಿ ಪರಿಕರಗಳಾದ ಬಿತ್ತನೆ ಬೀಜ, ಸಸ್ಯ ಸಂರಕ್ಷಣಾ ಔಷಧಿಗಳು, ಉಪಕರಣಗಳು, ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಭತ್ತ ಬೆಳೆ ಉತ್ತೇಜನಕ್ಕಾಗಿ ರೈತರಿಗೆ ಸಹಾಯಧನದಲ್ಲಿ ಪವರ್ ಟಿಲ್ಲರ್, ರೋಟೋವೇಟರ್, ಡೀಸೆಲ್ ಪಂಪ್ ಸೆಟ್, ರೀಪರ್, ಸಣ್ಣ ಟ್ರಾö್ಯಕ್ಟರ್ ಮತ್ತು ಟಾರ್ಪಲಿನ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಹೋಬಳಿವಾರು ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರಗಳ ಮೂಲಕ ರೈತರಿಗೆ ಕಡಿಮೆ ದರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ನೀಡಲಾಗುತ್ತಿದೆ ಎಂದು ವಿವರಿಸಿದರು.