ಕೊಡ್ಲಿಪೇಟೆ, ಫೆ. ೨೧: ಎಸ್.ಕೆ.ಎಸ್.ಎಸ್.ಎಫ್. ಹಾಗೂ ಎಸ್.ವೈ.ಎಸ್. ಕೊಡ್ಲಿಪೇಟೆ ಶಾಖೆ ವತಿಯಿಂದ ಮಜ್ಲಿಸುನ್ನೂರ್ ೮ನೇ ವರ್ಷದ ವಾರ್ಷಿಕೋತ್ಸವ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಸಮೀಪದ ಹ್ಯಾಂಡ್‌ಪೋಸ್ಟ್ ನೂರ್ ಮಹಲ್‌ನಲ್ಲಿ ನಡೆಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ಮೇಲಾಟೂರು ರವರು ಆಶೀರ್ವಚನ ನೀಡಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು.
ಸ್ಥಳೀಯ ಮಸ್ಜಿದುನ್ನೂರ್ ಖತೀಬರಾದ ಹಾರಿಸ್ ಬಾಖವಿ ಉದ್ಘಾಟನಾ ಭಾಷಣ ಮಾಡಿದರು. ಗೋಪಾಲಪುರ ಬದ್ರಿಯಾ ಮಸ್ಜಿದ್ ಖತೀಬರಾದ ಫೈಝಲ್ ಫೈಝಿ ಮುಖ್ಯ ಪ್ರಭಾಷಣ ನಡೆಸಿದರು. SಙS ಶಾಖಾಧ್ಯಕ್ಷರಾದ ಇಬ್ರಾಹಿಂ ಮಲ್ಲಳ್ಳಿರವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಎಸ್. ಮುಹಮ್ಮದ್ ಹಾಜಿ, ಮುಹಮ್ಮದಾಲಿ ಮೇಸ್ತಿç, ಎಸ್.ಕೆ.ಎಸ್.ಎಸ್.ಎಫ್. ಕೊಡಗು ಜಿಲ್ಲಾ ಕೋಶಾಧಿಕಾರಿ ಸಿದ್ದೀಕ್, ಕೊಡ್ಲಿಪೇಟೆ ಶಾಖಾಧ್ಯಕ್ಷ ಬಾಸಿತ್, ಮಸ್ಜಿದುನ್ನೂರ್ ಅಧ್ಯಕ್ಷರಾದ ಡಿ.ಎ. ಸುಲೈಮಾನ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯ ಹನೀಫ್ ಸೇರಿದಂತೆ ಇತರರು ಭಾಗವಹಿಸಿದ್ದರು.